Monday, June 8, 2026
Homeಕರಾವಳಿಉಡುಪಿಮಲ್ಪೆ: ಒಂದೇ ಬಾರಿಗೆ ಎರಡು ವಿಶ್ವದಾಖಲೆಗೆ ಪಾತ್ರರಾದ ರಾಷ್ಟ್ರೀಯ ಈಜುಪಟು ಗಂಗಾಧರ ಜಿ.ಕಡೆಕಾರು

ಮಲ್ಪೆ: ಒಂದೇ ಬಾರಿಗೆ ಎರಡು ವಿಶ್ವದಾಖಲೆಗೆ ಪಾತ್ರರಾದ ರಾಷ್ಟ್ರೀಯ ಈಜುಪಟು ಗಂಗಾಧರ ಜಿ.ಕಡೆಕಾರು

- Advertisement -
- Advertisement -

ಮಲ್ಪೆ : ರಾಷ್ಟ್ರೀಯ ಈಜುಪಟು  ಗಂಗಾಧರ ಜಿ.ಕಡೆಕಾರು ಅವರು ಒಂದೇ ಬಾರಿಗೆ ಎರಡು ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. 2022ರ ಜ.24ರಂದು ಮಲ್ಪೆ ಪಡುಕರೆ ಸಮುದ್ರದಲ್ಲಿ ಕೈಕಾಲಿಗೆ ಕೋಳ ತೊಟ್ಟು ಸಮುದ್ರದಲ್ಲಿ 3.5 ಕಿ.ಮೀ. ದೂರ ಕ್ರಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದರು. ಈ ವೇಳೆಯಲ್ಲಿ ಅವರು ಸುಮಾರು 5.35 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ ಮತ್ತೊಂದು ಹೊಸ ದಾಖಲೆಯನ್ನು ಕೂಡ ನಿರ್ಮಿಸಿದ್ದರು.

ಆಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಮನೀಷ್ ವೈಷ್ಣೋಯ್ ಮೊದಲ ದಾಖಲೆಯನ್ನು ಮಾತ್ರ ಘೋಷಣೆ ಮಾಡಿ ತಾತ್ಕಾಲಿಕ ಪ್ರಮಾಣ ಪತ್ರವನ್ನು ನೀಡಿದ್ದರು. ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ಕಳುಹಿಸಿಕೊಡಲಾಗುವುದು ಎಂದು ಆ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ ಇದೀಗ ದಾಖಲೆಯನ್ನು ಘೋಷಿಸಿ ಪ್ರಮಾಣಪತ್ರ ಹಸ್ತಾಂತರಿಸಲಾಗಿದೆ.

- Advertisement -

Latest News

error: Content is protected !!