Wednesday, June 3, 2026
Homeತಾಜಾ ಸುದ್ದಿಇಂದಿರಾ ಗಾಂಧಿ ಹಿಂದಿಕ್ಕಿ ಅತಿ ಹೆಚ್ಚು ಕಾಲ ದೇಶದ ಪ್ರಧಾನಮಂತ್ರಿ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ ನರೇಂದ್ರ...

ಇಂದಿರಾ ಗಾಂಧಿ ಹಿಂದಿಕ್ಕಿ ಅತಿ ಹೆಚ್ಚು ಕಾಲ ದೇಶದ ಪ್ರಧಾನಮಂತ್ರಿ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ ನರೇಂದ್ರ ಮೋದಿ

- Advertisement -
- Advertisement -

ನವದೆಹಲಿ: ಅತಿ ಹೆಚ್ಚು ದಿನಗಳ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಎರಡನೇ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ಮಾಜಿ ಪ್ರಧಾನಮಂತ್ರಿ ದಿ. ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿ ನರೇಂದ್ರ ಮೋದಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.ಮೊದಲನೇ ಸ್ಥಾನದಲ್ಲಿ ಅತಿ ಹೆಚ್ಚು ದಿನಗಳ ಕಾಲ ಸತತವಾಗಿ ಸೇವೆ ಸಲ್ಲಿಸಿರುವ ದೇಶದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಇದ್ದು, 16 ವರ್ಷ 286 ದಿನಗಳ ಪ್ರಧಾನಿ ಹುದ್ದೆಯಲ್ಲಿದ್ದರು.

ದಿ. ಇಂದಿರಾಗಾಂಧಿ 4,077 ದಿನಗಳ ಕಾಲ ಪ್ರಧಾನಮಂತ್ರಿಯಾಗಿದ್ದರು. ಸದ್ಯ ನರೇಂದ್ರ ಮೋದಿ 4,078 ದಿನಗಳ ಕಾಲ ಸತತ ಪ್ರಧಾನಿ ಹುದ್ದೆಯಲ್ಲಿದ್ದಾರೆ.ಅಲ್ಲದೇ, ಸ್ವಾತಂತ್ರ್ಯ ಭಾರತದಲ್ಲಿ ಜನಿಸಿ ಅತಿ ಹೆಚ್ಚು ದಿನಗಳ ಕಾಲ ಸತತ ದೇಶದ ಪ್ರಧಾನಮಂತ್ರಿಯಾದ ಮೊದಲ ಪ್ರಧಾನಿ ಎಂಬ ದಾಖಲೆಯನ್ನೂ ನರೇಂದ್ರ ಮೋದಿ ಬರೆದಿದ್ದಾರೆ.

- Advertisement -

Latest News

error: Content is protected !!