Friday, April 18, 2025
Homeಕರಾವಳಿಮಂಗಳೂರುಬೆಳ್ತಂಗಡಿ : ನಾರಾವಿ ಲೈನ್ ಮ್ಯಾನ್ ಸುಧಾಕರ ಅಂಡಿಂಜೆಯ ಟಿಸಿ ಹತ್ತಿರ ಆಕಸ್ಮಿಕ ಸಾವು

ಬೆಳ್ತಂಗಡಿ : ನಾರಾವಿ ಲೈನ್ ಮ್ಯಾನ್ ಸುಧಾಕರ ಅಂಡಿಂಜೆಯ ಟಿಸಿ ಹತ್ತಿರ ಆಕಸ್ಮಿಕ ಸಾವು

spot_img
- Advertisement -
- Advertisement -

ಬೆಳ್ತಂಗಡಿ: ನಾರಾವಿಯಲ್ಲಿ ಲೈನ್ ಮ್ಯಾನ್ ಆಗಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ನಾರವಿ ತುಂಬೆ ಗುಡ್ಡೆ ನಿವಾಸಿ ಕಿಟ್ಟ ಯಾನೆ ಸುಧಾಕರ (45) ಅವರು ಮಾ.26 ರಂದು ಸಂಜೆ ಆಕಸ್ಮಿಕವಾಗಿ ಅಂಡಿಂಜೆಯಲ್ಲಿ ಸಾವನ್ನಪ್ಪಿದ್ದಾರೆ.

ಮಾ.26 (ಇಂದು) ಸಂಜೆಯ ಸಮಯಕ್ಕೆ  ಇವರ ಮೃತದೇಹ ಅಂಡಿಂಜೆ ಟಿಸಿ ಹತ್ತಿರ ಅಂಡಿಂಜೆಯಲ್ಲಿ ಪತ್ತೆಯಾಗಿದ್ದು. ಕೈ ಯಲಿ ಒಂದು ಗಾಯದ ಗುರುತು ಪತ್ತೆಯಾಗಿದೆ. ಇವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಮೃತರು ಲೈನ್ ಮ್ಯಾನ್ 1998 ರಲ್ಲಿ ವೃತ್ತಿಯನ್ನು ಆರಂಭಿಸಿದ್ದು. ಉತ್ತಮವಾಗಿ ನಿರ್ವಹಿಸುತ್ತಾ ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.ಇವರು ಅವಿವಾಹಿತರಾಗಿದ್ದು. ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತದೇಹ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!