Friday, April 18, 2025
Homeಕರಾವಳಿಮಂಗಳೂರುಬೆಳ್ತಂಗಡಿ; ಕುತ್ಲೂರು ಉ.ಹಿ. ಪ್ರಾ. ಶಾಲೆಯಲ್ಲಿ ಮರಳಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸೋಣ ಅಭಿಯಾನ ಹಾಗೂ...

ಬೆಳ್ತಂಗಡಿ; ಕುತ್ಲೂರು ಉ.ಹಿ. ಪ್ರಾ. ಶಾಲೆಯಲ್ಲಿ ಮರಳಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸೋಣ ಅಭಿಯಾನ ಹಾಗೂ  ಸಂವಾದ ಕಾರ್ಯಕ್ರಮ

spot_img
- Advertisement -
- Advertisement -

ಬೆಳ್ತಂಗಡಿ; ಕುತ್ಲೂರು ಉ.ಹಿ. ಪ್ರಾ. ಶಾಲೆಯಲ್ಲಿ ಮರಳಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸೋಣ ಅಭಿಯಾನ ಹಾಗೂ  ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಾಭಾಗಿತ್ವದಲ್ಲಿ  ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕುತ್ಲೂರಿನಲ್ಲಿ ಶಾಲಾ ಪಠ್ಯದ ಜೊತೆ  ಪರಿಸರದ ಜೊತೆ ಬದುಕುವ ಜೀವನ ಶಿಕ್ಷಣ ನೀಡುತ್ತಿರುವ ಶಾಲೆ ರಾಜ್ಯಕ್ಕೆ ಮಾದರಿ ಎಂದರು.

ಕುತ್ಲೂರಿನಲ್ಲಿ ಶಾಲೆ ವಿಶ್ವ ವಿದ್ಯಾನಿಲಯದ ರೀತಿ ಕಾರ್ಯ ನಿರ್ವಹಿಸುತ್ತಿದೆ. ನಾವು ಪಡೆಯುವ ಪ್ರತಿ ಜ್ಞಾನವೇ ಶಿಕ್ಷಣ.ಶಾಲೆಯಲ್ಲಿ ನಿರ್ಮಿಸಲಾದ ಕೈ ತೋಟ  ಜೀವನದ ಅನುಭವ ನೀಡುತ್ತದೆ. ಸಮಾಜದಿಂದ ಏನು ಪಡೆದಿದ್ದೇನೆ ಎನ್ನುವ ಬದಲು ಸಮಾಜಕ್ಕೆ ಏನು ಮಾಡಬೇಕು ಎನ್ನುವುದು ಮುಖ್ಯ ಎಂದರು.ತಾನು ಸರಕಾರಿ ಶಾಲೆಯಲ್ಲಿ ಓದಿ ಇಂದು ಸಮಾಜದಲ್ಲಿ ಸ್ಥಾನ ಮಾನ ಪಡೆದಿದ್ದೇನೆ.ಆ ಕಾರಣದಿಂದ  ರಾಜ್ಯದ ಸರಕಾರಿ ಶಾಲೆಗಳ ಬಗ್ಗೆ ನಾನು ಕಲಿತ ಶಾಲೆಯ ಬಗ್ಗೆ ನನಗೆ ಅಭಿಮಾನವಿದೆ.ಅದೇ ರೀತಿ ಕುತ್ಲೂರು ಶಾಲೆಯ ಅಭಿವೃದ್ಧಿಗೆ ಶಾಲೆಯವರು ಸಲ್ಲಿಸಿದ ಮನವಿಯ ಪ್ರಕಾರ  ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್  ಮಾತನಾಡುತ್ತಾ, ಆರಂಭದಲ್ಲಿ ಮಕ್ಕಳ ಸಂಖ್ಯೆ 38 ಇಳಿಮುಖ ವಾಗಿದ್ದ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಪತ್ರಕರ್ತರ  ಗ್ರಾಮವಾಸ್ತವ್ಯ ಶಾಲಾ ಕೈ ತೋಟದ ಜೊತೆ400 ಅಡಿಕೆ ಗಿಡ 50 ತೆಂಗಿನ ಸಸಿ ನೆಟ್ಟು ಬೆಳೆಸಿದ್ದೇವೆ.ಪತ್ರಕರ್ತರ  ಗ್ರಾಮವಾಸ್ತವ್ಯ ಈ ನಿಟ್ಟಿನಲ್ಲಿ ಪ್ರೇರಣೆ ಯಾಗಿದೆ.ಖಾಸಗಿ ಶಾಲೆಯಲ್ಲಿ ವಾಹನ ವ್ಯವಸ್ಥೆ ಇರುವಂತೆ  ಕುತ್ಲೂರು ಶಾಲಾ ಮಕ್ಕಳಿಗೆ ಎರಡು ವಾಹನ ವ್ಯವಸ್ಥೆ ಮಾಡಲಾಗಿದೆ.ಆದರೆ ಸರಕಾರಿ ಶಾಲೆಗೆ ಸರಕಾರದಿಂದ ಅಥವಾ ಸಂಸ್ಥೆ ಗಳಿಂದ ಇನ್ನಷ್ಟು ಸಹಕಾರ ದೊರೆತರೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ದಂತಾಗುತ್ತದೆ ಎಂದು  ರಾಮಚಂದ್ರ ಭಟ್ ತಿಳಿಸಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ  ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ  ಭಾಸ್ಕರ ರೈ ಕಟ್ಟ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮುಖ್ಯ ಮಂತ್ರಿಗಳ ಮಾಜಿ ಸಲಹೆ ಗಾರ ಶಶಿಕಾಂತ ಅರಿಗ , ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥ ಮಿಕ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶ್ವೇತಾ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಸುಶ್ಮಾ ವಂದಿಸಿದರು.ಶಿಕ್ಷಕ ರಾಜಾ ಕಳಸಪ್ಪನವರ್ ಕಾರ್ಯಕ್ರಮ ನಿರೂಪಿಸಿದರು.

ಈ ಶಾಲೆಯ ಸಾವಯವ ತರಕಾರಿ ತೋಟದಲ್ಲಿ ಬೆಳೆದ 10 ಕೆಜಿ ಸೌತೆ ಹಾಗೂ 3 ಕೆಜಿ ಬೆಂಡೆ ಕಾಯಿಯನ್ನು ವಿದ್ಯಾರ್ಥಿಗಳು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರಿಗೆ ಹಸ್ತಾಂತರಿಸಿದರು. ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶಾಲೆಯ ಸಾವಯವ ತೋಟದಲ್ಲಿ ಬೆಳೆದ ತರಕಾರಿಯನ್ನು ಬೆಂಗಳೂರಿನಲ್ಲಿರುವ  ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕೃಷ್ಣಗೆ ತೆರಳಿ ವಿದ್ಯಾರ್ಥಿಗಳು ಹಸ್ತಾಂತರ ಮಾಡಲಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ತಿಳಿಸಿದರು

- Advertisement -
spot_img

Latest News

error: Content is protected !!