Sunday, April 28, 2024
Homeತಾಜಾ ಸುದ್ದಿಟೊಮ್ಯಾಟೋ ಶಾಕ್ ನಲ್ಲಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ; ನಂದಿನಿ ಹಾಲಿನ ದರ ಪ್ರತಿ...

ಟೊಮ್ಯಾಟೋ ಶಾಕ್ ನಲ್ಲಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ; ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ

spot_img
- Advertisement -
- Advertisement -

ಬೆಂಗಳೂರು: ಟೊಮ್ಯಾಟೋ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.ಏಕಾಏಕಿ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ ಮಾಡಲಾಗಿದೆ.

ಈ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ಹಾಲು ಒಕ್ಕೂಟಗಳು ನೀಡಿರುವಂತ ನಂದಿನಿ ದರ 5 ರೂ ಹೆಚ್ಚಳ ಪ್ರಸ್ತಾನೆಯ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಿದರು. ಅಲ್ಲದೇ ನಂದಿನಿ ಹಾಲಿನ ಪುಡಿಯ ದರವನ್ನು ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಅಂತಿಮವಾಗಿ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ, ನಂದಿನಿ ಹಾಲಿನ ದರವನ್ನು 5ರೂ ಹೆಚ್ಚಳದ ಬದಲಾಗಿ ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುವಂತ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಪರಿಷ್ಕೃತ ಹೆಚ್ಚಳದ ದರವು ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ.

- Advertisement -
spot_img

Latest News

error: Content is protected !!