- Advertisement -
- Advertisement -
ಬಂಟ್ವಾಳ: ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಬೇಕಾಬಿಟ್ಟಿ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ. ಈ ನಡುವೆ ನಂದಾವರ ಸರಕಾರಿ ಹಿ.ಪ್ರಾ.ಶಾಲೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಶಾಲೆಯ ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಇಂದು ನಡೆದಿದೆ.
ಶಾಲೆಯ ಮೂರು ಕೋಣೆಗಳ ಬೀಗ ಮುರಿದು ಒಳನುಗ್ಗಿ ಕೊಠಡಿಯಲ್ಲಿದ್ದ ಟಿವಿ ಸೇರಿದಂತೆ ಇತರ ಸೊತ್ತುಗಳಿಗೆ ಹಾನಿಮಾಡಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡುವ ಕುರಿತು ಬಂಟ್ವಾಳ ಬಿಇಓ ಜ್ಞಾನೇಶ್ ಅವರು ಶಾಲೆಯ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
- Advertisement -