Sunday, June 22, 2025
Homeಕರಾವಳಿಸಾಹಿತ್ಯ, ಸಾಂಸ್ಕೃತಿಕ, ಯಕ್ಷಗಾನ ರಂಗದಲ್ಲಿ ಸಾಧನೆಗೈದ ನಂದಳಿಕೆಯ ಬಾಲಚಂದ್ರರಾವ್ ಹೃದಯಾಘಾತದಿಂದ ನಿಧನ

ಸಾಹಿತ್ಯ, ಸಾಂಸ್ಕೃತಿಕ, ಯಕ್ಷಗಾನ ರಂಗದಲ್ಲಿ ಸಾಧನೆಗೈದ ನಂದಳಿಕೆಯ ಬಾಲಚಂದ್ರರಾವ್ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಮಂಗಳೂರು: ಕವಿ ಮುದ್ದಣನ ನಂದಳಿಕೆಯರೆಂದೇ ಪರಿಚಯಿಸಿಕೊಂಡಿದ್ದ ಬಾಲಚಂದ್ರರಾವ್ ಇಂದು(ಮೇ 14) ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಅವರ ಅಂತಿಮ ದರ್ಶನ ನಾಳೆ (ಮೇ 15) ಗುರುವಾರ ಬೆಳಿಗ್ಗೆ 6ರಿಂದ ಬೆಳಿಗ್ಗೆ ಹತ್ತು ಗಂಟೆಯವರೆಗೆ ಮಂಗಳೂರಿನ ಬಿಜೈನ ಚೌಟಾಸ್ ಕಂಪೌಡಿನಲ್ಲಿರುವ ಅವರ ಸ್ವಗೃಹದಲ್ಲಿರುತ್ತದೆ. ನಂತರ ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆಯಾಗಿದೆ.‌ ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಬಾಲಚಂದ್ರರಾವ್ ಹಿನ್ನೆಲೆ: ನಂದಳಿಕೆ ಬಾಲಚಂದ್ರರಾವ್ ಅವರು ಉಡುಪಿ ಜಿಲ್ಲೆಯ ನಂದಳಿಕೆಯವರು. ಕರ್ನಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದರು. ಮುದ್ದಣ ಸ್ಮಾರಕ ಮಿತ್ರ ಮಂಡಳಿ ಸ್ಥಾಪಕ ಗೌರವಾಧ್ಯಕ್ಷರು. ಮುದ್ದಣ ಸ್ಮಾರಕ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮುದ್ದಣ ಪುರಸ್ಕಾರ ವಿದ್ವತ್ ಸಂಮಾನ ಪರಂಪರೆಯ ಸಂಜೋಜಕರು. ಕವಿ ಮುದ್ದಣ ಸ್ಮಾರಕ ರಚನೆಗಾಗಿ ಡಾ. ಶಿವರಾಮ ಕಾರಂತ ಅವರಿಂದ ಸಂಮಾನ, ಉದಯವಾಣಿ ವಿಂಶತಿ ಪ್ರಶಸ್ತಿ, ಸಂದೇಶ ರಾಜ್ಯ ಪ್ರಶಸ್ತಿ, ದಾವಣಗೆರೆಯ ಪಂಪ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಶ್ರೀ ಪ್ರಶಸ್ತಿ, ಮುದ್ದಣ-125 ಸಂಸ್ಮರಣೆ ಯಲ್ಲಿ ಕುಶಿ ಅವರಿಂದ ಸಂಮಾನ ಹೀಗೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

- Advertisement -
spot_img

Latest News

error: Content is protected !!