Thursday, May 2, 2024
Homeಕರಾವಳಿವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ; ಮಂಗಳೂರಿನಲ್ಲಿ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ; ಮಂಗಳೂರಿನಲ್ಲಿ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

spot_img
- Advertisement -
- Advertisement -

ಮಂಗಳೂರು;ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕೋದು ಕಂಡುಬಂದಿದೆ.ಆದ್ರೆ ಪಾಕಿಸ್ತಾನ ಪರವಾಗಿ ಘೋಷಣೆ ಹಾಕಿದವರ ಬಂಧನ ಆಗಿಲ್ಲ.ರಾಜ್ಯದಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ಪಾರ್ಟಿ ಇದನ್ನು ವಿರೋಧಿಸಿಲ್ಲ.ಇದರ ಹಿಂದೆ ಕಾಂಗ್ರೆಸ್ ನ ಮಾನಸಿಕತೆ ಇದೆ ಎಂದಿದ್ದಾರೆ.

ಕಳೆದ ಬಾರಿ‌ ಕಾಂಗ್ರೆಸ್ ಸರ್ಕಾರ ಬಂದಾಗ ಬೆಳಗಾವಿ,ಉತ್ತರಕನ್ನಡದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಮೆರವಣಿಗೆ ಮಾಡಿದ್ರು.ಭಾರತದ ವಿರೋಧಿ ಘೋಷಣೆ ಹಾಕಿದವರನ್ನೇ ಈ ಸರ್ಕಾರದಿಂದ ಬಂಧನ ಮಾಡಲು ಆಗಿಲ್ಲ.ತುಷ್ಟೀಕರಣದ ರಾಜಕಾರಣಕ್ಕಾಗಿ ರಾಷ್ಟವಿರೋಧಿ ಕೃತ್ಯ ಮಾಡುವರರನ್ನು ಬೆಂಬಲಿಸಲಾಗುತ್ತಿದೆ.ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇರುವ ಪಾರ್ಟಿ ಎಂಬುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಕಾಂಗ್ರೆಸ್ ಮಣೆ ಹಾಕುತ್ತೆ.ಕಾಂಗ್ರೆಸ್ ರಾಷ್ಟ್ರವಿರೋಧಿ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.ರಾಜ್ಯ ಸಭಾ ಸದಸ್ಯ ಈ ಘಟನೆ ನಡೆದಾಗ ಖಂಡಿಸಬೇಕಿತ್ತು.ಆದ್ರೆ ಅವರೇ ಮೌನವಾಗಿದ್ದಾರೆ.ಅವರು ಪಾಕಿಸ್ತಾನಸ ಪರ ಇದ್ದಾರೆ ಎಂಬುದು ಸ್ಪಷ್ಟವಾಗಿದೆ.ಪಾಕಿಸ್ತಾನದ ಪರ ಘೋಷಣೆ ಹಾಕಿದವರನ್ನು ತಕ್ಷಣ ಬಂಧಿಸಬೇಕು ಜೈಲಿಗಟ್ಟಬೇಕು ಎಂದು ಗುಡುಗಿದ್ದಾರೆ.ನಾಸೀರ್ ಹುಸೇನ್ ಅವರ ನಿಲುವೇನೆಂದು ಸ್ಪಷ್ಟಪಡಿಸಬೇಕು.ಇಲ್ಲದಿದ್ದರೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಛಾಟಿಸಬೇಕು.ರಾಷ್ಟ್ರ ಭಕ್ತರ ಮೇಲೆ ಸರ್ಕಾರ ಕೇಸು ಹಾಕುತ್ತಿದೆ.ಇವರ ಕಾರ್ಯವನ್ನು ಖಂಡಿಸುವವರ ಮೇಲೆ ಕೇಸು ಹಾಕಲಾಗುತ್ತಿದೆ.ಈ ರಾಜ್ಯದಲ್ಲಿ ರಾಷ್ಟ್ರ ವಿರೋಧಿಗಳು ಮೆರೆಯುತ್ತಿದ್ದಾರೆ.ಅವರ ಮೇಲೆ ಕೇಸು ಹಾಕುವ ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ.ನಿನ್ನೆಯ ಘಟನೆಯನ್ನು ವಿರೋಧಿಸಿದವರ ಮೇಲೆ ಕೇಸು ಹಾಕುವ ಕೆಲಸ ಆಗ್ತಿದೆ ಎಂದು ಆರೋಪಿಸಿದ್ದಾರೆ.

ಘೋಷಣೆ ಹಾಕಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಹೇಳಿಲ್ಲ.ಮಾಧ್ಯಮಗಳು ಇದನ್ನು ಸ್ಪಷ್ಟವಾಗಿ ತೋರಿಸಿದೆ.ಮಾಧ್ಯಮಗಳ ವರದಿಯನ್ನು ಸತ್ಯಾ ಅಂತಾ ಕಾಂಗ್ರೆಸ್ ಒಪ್ಪಲ್ವಾ..?.ಒಪ್ಪೋದಾದ್ರೆ ಇದನ್ನು ಒಪ್ಪಬೇಕಲ್ವಾ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!