Thursday, June 4, 2026
Homeಕರಾವಳಿರಾಜ್ಯದಲ್ಲಿ ಬಿಜೆಪಿಗೆ ಹೀನಾಯ ಸೋಲಿನ ಸೂಚನೆ; ಸೋಷಿಯಲ್ ಮೀಡಿಯಾದಲ್ಲಿ ರಾಜ್ಯಾಧ್ಯಕ್ಷರ ಮೇಲೆ ಟ್ರೋಲಾಸ್ತ್ರ ಪ್ರಯೋಗ

ರಾಜ್ಯದಲ್ಲಿ ಬಿಜೆಪಿಗೆ ಹೀನಾಯ ಸೋಲಿನ ಸೂಚನೆ; ಸೋಷಿಯಲ್ ಮೀಡಿಯಾದಲ್ಲಿ ರಾಜ್ಯಾಧ್ಯಕ್ಷರ ಮೇಲೆ ಟ್ರೋಲಾಸ್ತ್ರ ಪ್ರಯೋಗ

- Advertisement -
- Advertisement -

ರಾಜ್ಯದಲ್ಲಿ ಬಿಜೆಪಿಗೆ ಸೋಲು ಖಚಿತವಾಗುತ್ತಿದ್ದಂತೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಜೋರಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನಳೀನ್ ಕುಮಾರ್ ಕಟೀಲ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅವರ ಫೋಟೋವನ್ನು ಮೃತದೇಹದ ರೀತಿಯಲ್ಲಿ ಸುತ್ತಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಟ್ರೋಲ್ ಮಾಡಲಾಗಿದೆ.ಈ ಪೋಸ್ಟ್ ಗೆ ಪೂರ ನಮ್ಮ” ಕೈ”ಟೇ ಅಂದಾಗಲೇ ಎಚ್ಚೆತ್ತುಕೊಳ್ಬೇಕಿತ್ತು.. ಎಂದು ಟೈಟಲ್ ಕೊಡಲಾಗಿದೆ. ಈ ಹಿಂದೆ ನಳೀನ್ ಕುಮಾರ್ ಕಟೀಲ್ ಮಾತನಾಡಿದ ಆಡಿಯೋ ವೈರಲ್ ಆಗಿದ್ದ ವಿಚಾರದ ಮೂಲಕ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಇನ್ನೊಂದೆಡೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ಹಿನ್ನೆಡೆ ಅನ್ನೋ ಪೋಸ್ಟ್  ಒಂದು ಸದ್ದು ಮಾಡುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ನಳೀನ್ ಕುಮಾರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!