- Advertisement -
- Advertisement -
ಮಂಗಳೂರು: ಈ ಹಿಂದೆ ನಿಗದಿಯಾದಂತೆ ಇಂದಿನಿಂದ ಮೈಸೂರು-ಮಂಗಳೂರು ನಡುವಿನ ವಿಮಾನಯಾನ ಆರಂಭವಾಗಿದೆ. ಇಂದು ಮೈಸೂರಿನಿಂದ ಅಲಯನ್ಸ್ ಏರ್ ನ ಮೊದಲ ವಿಮಾನ ಮಂಗಳೂರು ಏರ್ ಪೋರ್ಟ್ ಗೆ 11.22 ಕ್ಕೆ ತಲುಪಿದೆ.ಒಟ್ಟು 78 ಪ್ರಯಾಣಿಕರು ಈ ಯಾನದಲ್ಲಿ ಅಲಯನ್ಸ್ ಏರ್ ನಲ್ಲಿ ಬಂದಿಳಿದರು.
ಬಸ್ ಮೂಲಕಸುಮಾರು ಆರರಿಂದ ಏಳು ಗಂಟೆ ಕಾಲ ತಗುಲುವ ಪ್ರಯಾಣ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಕ್ರಮಿಸಬಹುದು.ಈ ಹೊಸ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಇರಲಿದೆ.
- Advertisement -