Thursday, June 4, 2026
Homeತಾಜಾ ಸುದ್ದಿಪಂಕ್ಚರ್ ಆದ ತಮ್ಮ ಕಾರಿನ ಟೈಯರ್ ಬದಲಾಯಿಸಿದ ಮೈಸೂರು ಡಿಸಿ: ರೋಹಿಣಿ ಸಿಂಧೂರಿ ಸರಳತೆಗೆ ಫಿದಾ...

ಪಂಕ್ಚರ್ ಆದ ತಮ್ಮ ಕಾರಿನ ಟೈಯರ್ ಬದಲಾಯಿಸಿದ ಮೈಸೂರು ಡಿಸಿ: ರೋಹಿಣಿ ಸಿಂಧೂರಿ ಸರಳತೆಗೆ ಫಿದಾ ಆದ ಜನ, ವಿಡಿಯೋ ವೈರಲ್

- Advertisement -
- Advertisement -

ಮೈಸೂರು: ಜಿಲ್ಲಾಧಿಕಾರಿಗಳು ಅಂದ್ರೆ ಹಾಗಿರ್ತಾರೆ, ಹೀಗಿರ್ತಾರೆ ಅವರ ಹಿಂದೆ ಮುಂದೆ ಜನ ಇರ್ತಾರೆ ಅನ್ನೋದೇನೋ ನಿಜ. ಆದ್ರೆ ಕೆಲವೊಮ್ಮೆ ಅವರು ಇಷ್ಟೊಂದು ಸರಳ ವ್ಯಕ್ತಿನಾ ಅನ್ನೋ ರೀತಿ ಕೆಲವು ಉನ್ನತಮಟ್ಟದ ಅಧಿಕಾರಿಗಳು ನಡೆದುಕೊಂಡು ಅಚ್ಚರಿ ಮೂಡಿಸ್ತಾರೆ. ಅಂತಹದ್ದೇ ಘಟನೆಯೊಂದು ನಡೆದಿದೆ.

ಹೌದು… ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಕುಟುಂಬದವರೊಂದಿಗೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟಯರ್ ಪಂಕ್ಚರ್ ಆಗಿದೆ. ಪಂಕ್ಟರ್ ಆದ ತಮ್ಮ ಕಾರಿನ ಟೈಯರ್ ತಾವೇ ತೆಗೆದಿದ್ದಾರೆ. ಜಾಕ್ ಏರಿಸಿ ಟೈಯರ್ ತೆಗೆದಿದ್ದಾರೆ. ಇದನ್ನು ಗಮನಿಸಿದವರು, ನೀವು ಡಿಸಿ ರೋಹಿಣಿ ಸಿಂಧೂರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಕ್ಕು ಸುಮ್ಮನಾದ ರೋಹಿಣಿ ಸಿಂಧೂರಿ ಅವರು ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಡಿಸಿಯವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!