Friday, June 5, 2026
HomeಕರಾವಳಿBig Breaking: ಬಾರದ ಲೋಕಕ್ಕೆ ಪಯಣ ಬೆಳೆಸಿದ ಭೂಗತ ಲೋಕದ ಮಾಜಿ ದೊರೆ...

Big Breaking: ಬಾರದ ಲೋಕಕ್ಕೆ ಪಯಣ ಬೆಳೆಸಿದ ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ

- Advertisement -
- Advertisement -

ಬೆಂಗಳೂರು: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ , 4R ಗ್ರೂಪ್ ನ ಮುಖ್ಯಸ್ಥ ಮತ್ತು ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಂದು ಬೆಳಗ್ಗಿನ ಜಾವ 1.55 ಕ್ಕೆ ನಿಧನರಾಗಿದ್ದಾರೆ.
ಮಾಜಿ ಡಾನ್ ಮುತ್ತಪ್ಪ ರೈ, ಪ್ರಸ್ತುತ ಜೈ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ಸಮಾಜ ಸೇವಕ’ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮುತ್ತಪ್ಪ ರೈ ಅವರು ರಿಯಲ್ ಎಸ್ಟೇಟ್ ಉದ್ಯಮಪತಿಗಳೂ ಆಗಿದ್ದರು.
ಮುತ್ತಪ್ಪ ರೈ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕ್ರಿಕೆಟಿಗ ಯುವರಾಜ್‌ ಸಿಂಗ್‌ಗೆ ಚಿಕಿತ್ಸೆ ನೀಡಿದ ವೈದ್ಯ ನಿತೇಶ್‌ ರೋಹಟಗಿ ಅವರಿಂದ ಮುತ್ತಪ್ಪ ರೈ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ದೇಹ ಚಿಕಿತ್ಸೆಗೆ ಸ್ಪಂದಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಅವರಿಗೆ ಈ ಹಿಂದೆ ಬೆಂಗಳೂರಿನ ಕೋರ್ಟ್ ಆವರಣದಲ್ಲಿ ವಿಚಾರಣೆಗೆ ಹಾಜರಾಗುವ ಸಮಯದಲ್ಲಿ ವಿರೋಧಿ ಬಣ ಹಾರಿಸಿದ ಐದು ಗುಂಡುಗಳು ದೇಹಕ್ಕೆ ಬಿದ್ದಾಗ ಸಾವಿನೊಂದಿಗೆ ಹೋರಾಡಿ ಬದುಕಿ ಬಂದಿದ್ದರು.
ಮುತ್ತಪ್ಪರೈ ಅವರು ಇಬ್ಬರು ಮಕ್ಕಳು, ಮೂವರು ಸಹೋದರರು, ಒಬ್ಬ ಸಹೋದರಿ ,ಅಪಾರ ಪ್ರಮಾಣದ ಬಂದು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ
ಬಿಡದಿ ಸ್ವ ಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಅಂತ್ಯ ಕ್ರಿಯೆ ನಡೆಯಲಿದ್ದು, ಕೇವಲ ಕುಟಂಬ ಸದಸ್ಯರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಅವರ ಅಭಿಮಾನಿಗಳು ಸಹಕರಿಸಬೇಕು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!