Thursday, June 4, 2026
Homeತಾಜಾ ಸುದ್ದಿಕೊರೊನ : ಭಾರತದಲ್ಲಿ ಒಂದೇ ದಿನ 3967 ಕೇಸ್ ಪತ್ತೆ, 100 ಮಂದಿ ಸಾವು ,ಒಟ್ಟು...

ಕೊರೊನ : ಭಾರತದಲ್ಲಿ ಒಂದೇ ದಿನ 3967 ಕೇಸ್ ಪತ್ತೆ, 100 ಮಂದಿ ಸಾವು ,ಒಟ್ಟು 81,970 ಸೋಂಕಿತರು

- Advertisement -
- Advertisement -

ನವ ದೆಹಲಿ, ಮೇ 15: ಭಾರತದಲ್ಲಿ ಮಾರಕ ಕೊರೊನ ತನ್ನ ರುದ್ರನರ್ತನ ಮುಂದುವರೆಸಿದೆ , ಸೋಂಕಿತರ ಸಂಖ್ಯೆ 81 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3967 ಕೇಸ್ ಪತ್ತೆಯಾಗಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈವರೆಗೂ ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶ ಪ್ರಕಾರ ದೇಶದಲ್ಲಿ 81,970 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಇದರಲ್ಲಿ 51,401 ಪ್ರಕರಣಗಳು ಸಕ್ರಿಯವಾಗಿದೆ. 27,920 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟು 2,649 ಜನ ಮರಣ ಹೊಂದಿದ್ದಾರೆ.

- Advertisement -

Latest News

error: Content is protected !!