- Advertisement -
![]()
- Advertisement -
ಉಡುಪಿ: ಇಲ್ಲಿನ ಬಿಜೂರು ಗ್ರಾಮದ ಕೋಟ್ಯಾಡಿ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಯಡ್ತರೆ ಯೋಜನನಗರದ ಮಹಮ್ಮದ್ ಇರ್ಷಾದ್(36) ಹಾಗೂ ಮಹಮ್ಮದ್ ಜಾಹೀರ್(34) ಬಂಧಿತ ಆರೋಪಿಗಳು. ರಾಜು, ಶೇಖರ ಹಾಗೂ ಭರತ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾರೆ.
ಬಂಧಿತರಿಂದ 5 ಕೋಳಿ, ಎರಡು ಕೋಳಿಯ ಕಾಲಿಗೆ ಕಟ್ಟಿದ ಕತ್ತಿ ಹಾಗೂ 1500ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


