Thursday, May 2, 2024
Homeಕರಾವಳಿಕಾರವಾರ: ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಕಣ್ಣು..! 'ದಿ ವಾಯ್ಸ್ ಆಫ್ ಹಿಂದ್'ನ...

ಕಾರವಾರ: ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಕಣ್ಣು..! ‘ದಿ ವಾಯ್ಸ್ ಆಫ್ ಹಿಂದ್’ನ ಕವರ್ ಪೇಜ್​ಗೆ ರುಂಡರಹಿತ ಮುರ್ಡೇಶ್ವರನ ಫೋಟೋ….!

spot_img
- Advertisement -
- Advertisement -

ಕಾರವಾರ: ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿದ ಫೋಟೋವೊಂದನ್ನು ಐಸಿಸ್ ತನ್ನ ಮ್ಯಾಗಜಿನ್​ನ ಮುಖಪುಟವೊಂದಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಐಸಿಸ್ ಮ್ಯಾಗಜೀನ್ ‘ದಿ ವಾಯ್ಸ್ ಆಫ್ ಹಿಂದ್’ನ ಕವರ್ ಪೇಜ್​ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ನಕಲಿ ದೇವರುಗಳನ್ನು ಹೊಡೆದು ಹಾಕುವ ಸಮಯ ಬಂದಿದೆ (Its time to Break False Gods ) ಎಂಬ ಬರಹವನ್ನು ಬರೆಯಲಾಗಿದೆ. ಹಾಗು ಇದರ ಜೊತೆಗೆ ಶಿವನ ಪ್ರತಿಮೆಯ ರುಂಡ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರ ಬಳಸಿಕೊಳ್ಳಲಾಗಿದೆ.

ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಅನ್ಶುಲ್ ಸಕ್ಸೇನಾ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು, ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

‘ದಿ ವಾಯ್ಸ್ ಆಫ್ ಹಿಂದ್’ ಐಸಿಸ್ ಉಗ್ರವಾದಿ ಸಂಘಟನೆ ಮತ್ತು ಕಾಶ್ಮೀರದ ಉಗ್ರವಾದಿಗಳ ಪರ ಇರುವ ಅನೈನ್ ಪತ್ರಿಕೆ. ಕಳೆದ ಬಾರಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭಟ್ಕಳದಲ್ಲಿ ಅಡಗಿದ್ದ ಐಸಿಸ್ ಪ್ರೇರಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಜುಫ್ರಿ ಜವಾಹರ್ ದಾಮುದಿ ಎನ್ನುವ ಬಂಧಿತ ವ್ಯಕ್ತಿ ಭಟ್ಕಳದಲ್ಲಿದ್ದೇ ದಿ ವಾಯ್ಸ್ ಆಫ್ ಹಿಂದ್ ಪತ್ರಿಕೆಯಲ್ಲಿ ಬರೆಯುತ್ತಿದ್ದ. ಅದರ ಮೂಲಕ ಐಸಿಸ್ ವಿಚಾರಧಾರೆಗಳನ್ನು ಪ್ರಚುರ ಪಡಿಸುತ್ತಿದ್ದ ಎನ್ನುವ ವಿಚಾರವನ್ನು ಎನ್‌ಐಎ ಅಧಿಕಾರಿಗಳು ಪತ್ತೆ ಮಾಡಿದ್ದರು. ಅದರ ಬೆನ್ನಲ್ಲೇ ಈ ರೀತಿ ಮುರುಡೇಶ್ವರದ ಶಿವನ ಚಿತ್ರವನ್ನು ವಿಕೃತಗೊಳಿಸಿ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆಯಾ ಎನ್ನುವ ಸಂಶಯ ಉಂಟಾಗಿದೆ.

- Advertisement -
spot_img

Latest News

error: Content is protected !!