Sunday, April 28, 2024
Homeತಾಜಾ ಸುದ್ದಿನಾಲ್ಕು ವರ್ಷದ ಬಾಲಕನ ಕೊಲೆ!.. 17 ವರ್ಷದ ಹುಡುಗಿ ಬಂಧಿತ ಆರೋಪಿ

ನಾಲ್ಕು ವರ್ಷದ ಬಾಲಕನ ಕೊಲೆ!.. 17 ವರ್ಷದ ಹುಡುಗಿ ಬಂಧಿತ ಆರೋಪಿ

spot_img
- Advertisement -
- Advertisement -

ಮುಂಬಯಿ: ಇಲ್ಲಿನ ಅಪಾರ್ಟ್​ಮೆಂಟ್​ ಒಂದರಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ನಾಲ್ಕು ವರ್ಷದ ಬಾಲಕನ ಅಸಹಜ ಸಾವು ಸಂಭವಿಸಿತ್ತು.ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದರು. ಈಗ ಅದೇ ಕಟ್ಟಡದಲ್ಲಿನ ಮನೆಯೊಂದರ ಹದಿನೇಳರ ಬಾಲಕಿಯನ್ನು ಪೊಲೀಸರು ಬಾಲಕನ ಹತ್ಯೆ ಪ್ರಕರಣದ ಆರೋಪಿ ಎಂದು ತನಿಖೆ ನಡೆಸಿ, ಸಾಕ್ಷ್ಯಾಧಾರ ಸಂಗ್ರಹಿಸಿ ಬಂಧಿಸಿದ್ದಾರೆ.

ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಪ್ರಕಾರ ನಾಲ್ಕು ವರ್ಷದ ಬಾಲಕ ಗ್ರೌಂಡ್ ಫ್ಲೋರ್​ನಲ್ಲಿ ಆಟ ವಾಡುತ್ತಾ ಮೂತ್ರ ವಿಸರ್ಜನೆ ಮಾಡಬೇಕೆಂದೆನಿಸಿ ಆತ ಮನೆಯಲ್ಲಿ ಯಾರೂ ಇಲ್ಲದ ಕಾರಣ ಈ 17 ವರ್ಷದ ಹುಡುಗಿಯ ಮನೆಗೆ ತೆರಳಿದ್ದ. ಮನೆಯಲ್ಲಿ ಆಕೆ ಒಬ್ಬಳೇ ಇದ್ದಳು. ಆತ ಆಕೆಯೊಂದಿಗೆ ಆಟ ಆಡೋದಕ್ಕೆ ಶುರುಮಾಡಿದ. ಆಟದ ನಡುವೆ ಆಕೆ ತಲೆದಿಂಬನ್ನು ಮಗುವಿನ ಮುಖಕ್ಕೆ ಹಿಡಿದಿದ್ದಳು. ಆತ ಪ್ರಜ್ಞ ಕಳೆದುಕೊಂಡಿದ್ದ. ಆತ ಚಟುವಟಿಕೆ ನಿಲ್ಲಿಸಿದ್ದರಿಂದ ಗಾಬರಿಯಾದ ಹುಡುಗಿ ಕೂಡಲೇ ಮನೆಯಲ್ಲಿದ್ದ ಗೋಣಿ ಚೀಲದಲ್ಲಿ ಆತನನ್ನು ತುಂಬಿ ಕಿಟಕಿಯಿಂದ ಹೊರಕ್ಕೆ ಎಸೆದಿದ್ದಳು.

ಬಾಲಕನಿಗೆ ಹುಡುಕಾಟ ಶುರುಮಾಡಿದರು. ಕೊನೆಗೆ ಈ ಬಾಲಕಿಯ ಮನೆಯ ಕಿಟಕಿಯ ಕೆಳಗೆ ಗೋಣಿ ಚೀಲದೊಳಗೆ ಬಾಲಕ ಪತ್ತೆಯಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ವಿಚಾರಣೆ ತೀವ್ರಗೊಂಡಾಗ ಹುಡುಗಿ ನಡೆದ ಘಟನೆಯನ್ನು ವಿವರಿಸಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!