Tuesday, July 1, 2025
Homeಕರಾವಳಿಪೆರಾಜೆ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ

ಪೆರಾಜೆ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ

spot_img
- Advertisement -
- Advertisement -

ಪೆರಾಜೆ: ಸುಳ್ಯದ ಗಡಿ ಭಾಗದಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ ಓರ್ವ ವ್ಯಕ್ತಿಯನ್ನು ಕಡಿದು ಕೊಲೆ ಮಾಡಲಾಗಿದೆ.

ಉತ್ತರ ಕುಮಾರ್ ಎಂಬವರನ್ನು ದೊಡ್ಡಪನ ಮಗನಾದ ದಿ .ಕೇಶವ ಅವರ ಪತ್ನಿ ತಾರಾಮಣಿ ಹಾಗು ಅವರ ಮಗ ಧರಣಿಧರ ಸೇರಿ ಮಧ್ಯರಾತ್ರಿ ಮಾರಕಾಯುಧಗಳಿಂದ ಹತ್ಯೆ ಮಾಡಿದ್ದಾರೆ.

ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಉತ್ತರಕುಮಾರ ಮತ್ತು ತಾರಾಮಣಿ ಅವರ ನಡುವೆ ಅಸ್ತಿ ವಿವಾದ ಹೊಗೆಯಾಡುತ್ತಿತ್ತು . ಈ ಹಿನ್ನಲೆಯಲ್ಲಿ ಶುಕ್ರವಾರ ರಾತ್ರೀ ಅವರ ಮನೆಯತ್ತ ಜಗಳ ಮಾಡುತ್ತ ತೆರಳಿದ್ದ .ಅಲ್ಲದೆ ಮನೆಗೆ ನುಗ್ಗಲು ಯತ್ನಿಸಿದಾಗ ಧರಣಿಧರ ಮತ್ತು ತಾರಾಮಣಿ ಕತ್ತಿಯಿಂದ ಕಡಿದರೆನ್ನಲಾಗಿದೆ. ಇದರಿಂದ ಉತ್ತರಕುಮಾರ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ವಿಷ ಬೆರಕೆ ಪ್ರಕರಣ
ಕೆಲವು ಸಮಯದ ಹಿಂದೆ ತಾರಾಮಣಿಯವರ ಚಹಾದ ಮಡಕೆಗೆ ವಿಷ ಬೆರಕೆ ಪ್ರಕರಣವೊಂದು ನಡೆದಿತ್ತು .ಇದರಲ್ಲಿ ಚಾ ಸೇವಿಸಿದವರು ಅಸ್ತವಸ್ತಗೊಂಡಿದ್ದರು .ಈ ಪ್ರಕರಣಕೆ ಸಂಬಂಧಿಸಿ ಉತ್ತರಕುಮಾರ ವಿರುದ್ಧ ದೂರು ನೀಡಲಾಗಿತ್ತು.ಆದ್ರೆ ಈ ಪ್ರಕರಣದ ವಿಚಾರಣೆ ನಡೆದ್ದಿಲ್ಲ ಎಂದು ಸ್ಥಳಿಯರು ಹೇಳುತ್ತಾರೆ. ಮಡಿಕೇರಿ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!