Thursday, June 4, 2026
Homeಕರಾವಳಿಉಪ್ಪಿನಂಗಡಿ: ಕರಾಯದಲ್ಲಿ ಕುಡಿದು ರಂಪಾಟ ಮಾಡುತ್ತಿದ್ದ ತಂದೆಯನ್ನು ಕಡಿದು ಕೊಂದ ಮಕ್ಕಳು

ಉಪ್ಪಿನಂಗಡಿ: ಕರಾಯದಲ್ಲಿ ಕುಡಿದು ರಂಪಾಟ ಮಾಡುತ್ತಿದ್ದ ತಂದೆಯನ್ನು ಕಡಿದು ಕೊಂದ ಮಕ್ಕಳು

- Advertisement -
- Advertisement -

ಕರಾಯ: ಕುಡಿದು ಬಂದು ಮನೆಯಲ್ಲಿ ಸದಾ ಗಲಾಟೆ ಮಾಡುತ್ತಿದ್ದ ತಂದೆಯನ್ನು ಮಕ್ಕಳಿಬ್ಬರು ಸೇರಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದ ಮುಗ್ಗದ ಆನೆಪಲ್ಲ ಎಂಬಲ್ಲಿ ಜೂ.14ರಂದು ಮಧ್ಯರಾತ್ರಿ ನಡೆದಿದೆ.

ಮೃತರನ್ನು ಧರ್ಣಪ್ಪ ಅಲಿಯಾಸ್ ಕೊರಗಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ನಡೆಸಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಧರ್ನಪ್ಪ ಪೂಜಾರಿಯವರು ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ ವಿಚಾರಕ್ಕೆ ಆಗಾಗ ಪತ್ನಿ, ಮಕ್ಕಳು ಇವರಲ್ಲಿ ಜಗಳ ಮಾಡುತ್ತಿದ್ದರು. ಆದಿತ್ಯವಾರ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳೊಳಗೆ ಜಗಳವಾಗಿದ್ದು, ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದಾರೆ. ಹಲ್ಲೆಗೊಳಗಾದ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!