Thursday, June 4, 2026
Homeಪ್ರಮುಖ-ಸುದ್ದಿಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ

- Advertisement -
- Advertisement -

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿರುವುದಾಗಿ ಕಚೇರಿ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆಯಿಂದ, ಕರ್ತವ್ಯದಲ್ಲಿರುವಾಗಿನಿಂದಲೇ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ವಿಚಾರವನ್ನು ಪಾಕಿಸ್ತಾನದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರುವಾಗಿಯೂ ಗೊತ್ತಾಗಿದೆ.
ಸಿಬ್ಬಂದಿ ನಾಪತ್ತೆಯಾಗಿರುವ ಕುರಿತು ಮೂಲಗಳ ಮಾಹಿತಿ ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ .


ಕಳೆದ ತಿಂಗಳು ಭಾರತದಲ್ಲಿನ ಪಾಕ್​ ರಾಯಭಾರ ಕಚೇರಿಯಲ್ಲಿ ವೀಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಭಾರತ ಗಡೀಪಾರು ಮಾಡಿತ್ತು. ಇದಾದ ನಂತರದಲ್ಲಿ ಪಾಕ್​ನಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಯನ್ನು ಹೋದಲೆಲ್ಲಾ ಹಿಂಬಾಲಿಸುವುದು ಸೇರಿ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು.
ಹೆಚ್ಚಿನ ಮಹಿತ್ಯನ್ನು ನಿರೀಕ್ಷಿಸಲಾಗುತ್ತಿದೆ .

- Advertisement -

Latest News

error: Content is protected !!