- Advertisement -
- Advertisement -
ಮಂಗಳೂರು: ಮೂಡ ನಗರಾಭಿವೃದ್ಧಿ ಪ್ರಾಧಿಕಾರದ ಉದ್ಯೋಗಿ ಕೀರ್ತನ್ ಅಳಪೆ ( 38) ಎಂಬವರು ಇಂದು ಉರ್ವಸ್ಟೋರ್ ಕಚೇರಿಯ ಸ್ಟೋರ್ ರೂಮ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗ್ಗೆ ಬೇಗನೆ ಕಚೇರಿಗೆ ಬಂದಿದ್ದ ಕೀರ್ತನ್ 9.40ಕ್ಕೆ ಸ್ಟೋರ್ ರೂಮ್ ಗೆ ತೆರಳಿದ್ದರು. ಆ ಬಳಿಕ ಯಾರಿಗೂ ಸಿಕ್ಕಿರಲಿಲ್ಲ. ಮಧ್ಯಾಹ್ನ 12 ಗಂಟೆ ವರೆಗೆ ಸಹೋದ್ಯೋಗಿ ಕಾಣದೇ ಇದ್ದಾಗ ಹುಡುಕಲು ಆರಂಭಿಸಿದ್ದಾರೆ. ಬಳಿಕ ಕಚೇರಿಯ ಇನ್ನೊಂದು ಮಹಡಿಯಲ್ಲಿದ್ದ ಸೈಬರ್ ಕ್ರೈಂ ಪೊಲೀಸರ ಸಹಾಯ ಕೋರಿದ್ದಾರೆ. ಆಗ ಮೊಬೈಲ್ ಟವರ್ ಸಿಗ್ನಲ್ ಮುಡಾ ಕಚೇರಿ ಕಟ್ಟಡವನ್ನೇ ತೋರಿಸಿದೆ. ಬಳಿಕ ಎಲ್ಲಾ ಕೋಣೆಗಳಲ್ಲಿ ಶೋಧ ನಡೆಸಿದಾಗ ಸ್ಟೋರ್ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ನರ ದೌರ್ಬಲ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಆಸ್ಪತ್ರೆಗೂ ದಾಖಲಾಗಿದ್ದರು. ಅವರಿಗೆ ಇತ್ತೀಚೆಗೆ ಪದೋನ್ನತಿ ಕೂಡಾ ಆಗಿತ್ತು ಎನ್ನಲಾಗಿದೆ.
- Advertisement -