Friday, April 26, 2024
Homeಕರಾವಳಿಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ ದಿಢೀರ್ ಭೇಟಿ; ಆಸ್ಪತ್ರೆಯ ವ್ಯವಸ್ಥೆಯ...

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ ದಿಢೀರ್ ಭೇಟಿ; ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ; ಮಾಜಿ ಶಾಸಕ ಕೆ ವಸಂತ ಬಂಗೇರ ಅವರು  ನಗರದ ತಾಲೂಕು ಆಸ್ಪತ್ರೆಗೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ ಡಯಾಲಿಸಿಸ್ ಘಟಕದ ಅವ್ಯವಸ್ಥೆಯ ಬಗ್ಗೆ ಹಾಗೂ ಆಸ್ಪತ್ರೆಯ ಒಟ್ಟು ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಡಯಾಲಿಸಿಸ್ ಘಟಕದಲ್ಲಿನ ಅವ್ಯವಸ್ಥೆಗಳ ಬಗ್ಗೆ ರೋಗಿಗಳು ಬಂಗೇರರ ಗಮನ ಸೆಳೆದರು.

ಡಯಾಲಿಸಿಸ್ ವಿಭಾಗದಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ದೂರವಾಣಿಯ ಮೂಲಕ ಅವರನ್ನು  ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಡಯಾಲಿಸಿಸ್ ಘಟಕದಲ್ಲಿ ಎರಡು ಡಯಾಲಿಸಿಸ್ ಯಂತ್ರಗಳು ಕಳೆದ ಕೆಲವು ತಿಂಗಳುಗಳಿಂದ ಕೆಟ್ಟು ಹೋಗಿದ್ದು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ ಎ.ಸಿ ವ್ಯವಸ್ಥೆಯೂ ಸರಿಯಾಗಿಲ್ಲ. ಇಂಜೆಕ್ಷನ್ ಹಣ ಕೊಟ್ಟು ತೆಗೆದುಕೊಳ್ಳಬೇಕಾಗಿದೆ ಹೀಗೆ ಹಲವಾರು ಸಮಸ್ಯೆಗಳನ್ನು ರೋಗಿಗಳು ಗಮನಕ್ಕೆ ತಂದರು. ಈ ಬಗ್ಗೆ ಡಿ.ಎಚ್.ಒ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವಸಂತ ಬಂಗೇರ ಅವರು ಅವ್ಯವಸ್ಥೆಯ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು. ಡಯಾಲಿಸಿಸ್ ಘಟಕದ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ವಿಚಾರವನ್ನು ವೈದ್ಯರುಗಳು ತಿಳಿಸಿದರು.

ಆಸ್ಪತ್ರೆಯಲ್ಲಿ ಯಾವುದೇ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು ಅಗತ್ಯ ಸಂದರ್ಭದಲ್ಲಿ ಔಷಧಿಗಳನ್ನು ಆಸ್ಪತ್ರೆಯ ವಿಶೇಷ ಅನುದಾನ ಉಪಯೋಗಿಸಿ ಹೊರಗಿನಿಂದ ಖರೀದಿಸಿ ನೀಡುವಂತೆಯೂ ಸೂಚನೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ವಸಂತ ಬಂಗೇರ ಅವರು ಡಯಾಲಿಸಿಸ್ ಘಟಕ ಸರಿಯಾಗಿ ಕೆಲಸ ಮಾಡದ ಕಾರಣದಿಂದಾಗಿ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇಲ್ಲಿ ಎಂಟು ಡಯಾಲಿಸಿಸ್ ಯಂತ್ರಗಳಿದ್ದು ಎರಡು ಹಾಳಾಗಿದೆ. 13 ಮಂದಿ ಇನ್ನೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕೆಟ್ಟು ಹೋದವುಗಳನ್ನು ದುರಸ್ತಿ ಮಾಡುವ ಕಾರ್ಯ ಮಾಡಿಲ್ಲ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. 15 ದಿನದಲ್ಲಿ ಸರಿಪಡಿಸುವ ಭರವಸೆ ನೋಡಿದ್ದಾರೆ ಎಂದರು.

ಹಿಂದೆ ಎರಡು ಹೆಚ್ಚುವರಿ ಡಯಾಲಿಸಿಸ್ ಘಟಕವನ್ನು ಕೊಡುಗೆಯಾಗಿ ನೀಡಲು ದಾನಿಗಳು ಬಂದಿದ್ದರು. ಆದರೆ ಶಾಸಕ ಹರೀಶ್ ಪೂಂಜ ಅವರು ಅದು ಬೇಡ  ತಾನೇ ಹಾಕಿಸುತ್ತೇನೆ ಎಂದ ಕಾರಣಕ್ಕೆ ಅದನ್ನು ತೆಗೆದುಕೊಂಡಿಲ್ಲ ಆದರೆ ಅವರು ಹೊಸ ಯಂತ್ರಗಳನ್ನು ತರಲಿಲ್ಲ ಅಲ್ಲದೆ ಹಿಂದೆ ಇದ್ದುದನ್ನು ಸರಿಯಾಗಿ ಉಳಿಸಿಕೊಳ್ಳದೆ ಎರಡು ಹಾಳಾಗಿ ಹೋಗಿದೆ. ಬೆಳ್ತಂಗಡಿಗೆ ಇನ್ನೆರಡು ಡಯಾಲಿಸಿಸ್ ಯಂತ್ರಗಳು ಅಗತ್ಯವಾಗಿ ಬೇಕಾಗಿದ್ದು ಒಂದೋ ಶಾಸಕರು ಇದರ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಅವರು ಹೇಳಿದರೆ ತಾನು ದಾನಿಗಖ ಮೂಲಕ ಅದಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಯಾರೂ ಸಿಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ರಾಜ್ಯದಾದ್ಯಂತ ಡಯಾಲಿಸಿಸ್ ಘಟಕಗಳ ನಿರ್ವಹಣೆಯನ್ನು ಒಂದೇ ಸಂಸ್ಥೆ ಪಡೆದಿದ್ದು  ಇವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡು ಬರುತ್ತಿದೆ ಇದರಿಂದಾಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು. ಇದರಲ್ಲಿಯೂ ಕಮಿಷನ್ ದಂಧೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಬಂಗೇರ ಅವರು ಇಂತಹ ವ್ಯವಸ್ಥೆಗಳಿಗೆ ಇನ್ನು ಅವಕಾಶ ನೀಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ, ಕೆ.ಪಿ.ಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!