Friday, March 29, 2024
Homeಕೊಡಗುಕೊಡಗು: ಸರ್ಕಾರಿ‌ ಶವಾಗಾರದಲ್ಲಿ ಹೆಣ್ಣು‌ಮಕ್ಕಳ‌ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಕಾಮುಕ : ಬಯಲಾಯ್ತು ಕೋವಿಡ್...

ಕೊಡಗು: ಸರ್ಕಾರಿ‌ ಶವಾಗಾರದಲ್ಲಿ ಹೆಣ್ಣು‌ಮಕ್ಕಳ‌ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಕಾಮುಕ : ಬಯಲಾಯ್ತು ಕೋವಿಡ್ ವಾರಿಯರ್ ನ ನಿಜ ಬಣ್ಣ

spot_img
- Advertisement -
- Advertisement -

ಕೊಡಗು; ಸರ್ಕಾರಿ ಆಸ್ಪತ್ರೆಯ  ಶವಾಗಾರ ಜವಾನನಾಗಿದ್ದುಕೊಂಡೇ ಹೆಣ್ಣುಮಕ್ಕಳ ಮೃತದೇಹದ ಬೆತ್ತಲೆಪೋಟೋಗಳನ್ನು ಮೊಬೈಲ್ ನಲ್ಲಿ ತೆಗೆದಿಟ್ಟುಕೊಂಡದ್ದು ಮತ್ತು  ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಶವಾಗಾರಕ್ಕೆ ಕರೆಸಿ ದೈಹಿಕವಾಗಿ ಈ ಆರೋಪಿ ಬಳಸಿಕೊಂಡಿರುವುದರ ಬಗ್ಗೆ ಮಡಿಕೇರಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

ಜಿಲ್ಲಾಸ್ಪತ್ರೆಯ ಶವಾಗಾರದ ಸಿಬ್ಬಂದಿ ಆಗಿದ್ದ  ಸಯ್ಯದ್  ವಿರುದ್ದ ಹಿಂದೂ ಸಂಘಟನೆಗಳು ದೂರು ನೀಡಿವೆ.

ಮಡಿಕೇರಿಯಲ್ಲಿರುವ  ಜಿಲ್ಲಾಸ್ಪತ್ರೆಯ ಶವಾಗಾರ ಜವಾನನಾಗಿ (ಒಳಗುತ್ತಿಗೆ ) ಕೆಲಸ ಮಾಡುತ್ತಿದ್ದ ಸೈಯದ್ ಎಂಬಾತ ಕೋವಿಡ್ ಆರಂಭದ ದಿನದಿಂದಲೂ ಕೂಡ ವಾರಿಯರ್ ಆಗಿ ಗುರುತಿಸಿಕೊಂಡಿದ್ದ.  ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯಿಂದ ಸಿಂಪತಿ ಗಿಟ್ಟಿಸಿಕೊಂಡಿದ್ದ ಈತ  ಕೆಲವು ಹೆಣ್ಣುಮಕ್ಕಳ ಜೊತೆಗಿನ ಸಲುಗೆಯನ್ನೇ ಬಳಸಿ  ತನ್ನ ಕಾಮತೃಷೆ ತೀರಿಸಲು ಆರಂಭಿಸಿದ್ದ .

ಇಷ್ಟೇ ಅಲ್ಲದೇ ಶವಾಗಾರ ಜವಾನನಾಗಿದ್ದುಕೊಂಡು
ಶವಾಗಾರದಲ್ಲಿ ಬರುವ ಸಾಕಷ್ಟು  ಹೆಣ್ಣುಮಕ್ಕಳ ಮೃತದೇಹದ ಪೋಟೋಗಳನ್ನು ತನ್ನ ಮೊಬೈಲ್ ನಲ್ಲಿ ಗೌಪ್ಯವಾಗಿ ಇಟ್ಟುಕೊಂಡಿದ್ದ. ಇವಿಷ್ಟೇ ಅಲ್ಲದೇ ಕೋವಿಡ್ ಸಮಯದಲ್ಲಿ ಇವರಿಗೆ ಉಳಿದುಕೊಳ್ಳಲು ಶವಾಗಾರದಲ್ಲಿ   ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ
ಈತ ಆಸ್ಪತ್ರೆಯ ಅದೆಷ್ಟೋ ಹೆಣ್ಣುಮಕ್ಕಳನ್ನು ಬ್ಲಾಕ್ ಮೇಲ್ ಮಾಡಿ ಶವಾಗಾರಕ್ಕೆ ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ದಾಖಲೆ ಇರುವುದಾಗಿ ಹಿಂದೂ ಸಂಘಟನೆ ಪ್ರಮುಖರು ತಿಳಿಸಿದ್ದಾರೆ.

ಶವವನ್ನೇ ಕಾಮುಖ ದೃಷ್ಟಿಯಿಂದ  ನೋಡುತ್ತಿದ್ದ  ಸೈಯದ್ ನ ಮೋಸದ ಬಲೆಗೆ ಬಿದ್ದವರಲ್ಲಿ ಅತೀಹೆಚ್ಚು ಜನ ವಿವಾಹಿತೆಯರೇ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ  ಹಿಂದೂ ಸಂಘಟನೆಯ ಪ್ರಮುಖರು  ಜಿಲ್ಲಾಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದು  ಈತನ ವಿರುದ್ಧ ಕಠಿಣ ಕ್ರಮಕ್ಕೆ    ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ತಾವು ಕೂಡ ತನಿಖೆಗೆ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ವೈದ್ಯಕೀಯ ಕಾಲೇಜು ಡೀನ್ ಡಾ. ಕಾರ್ಯಪ್ಪ ತಿಳಿಸಿದ್ದಾರೆ.ಪೋಲಿಸ್ ತನಿಖೆ ಬಳಿಕ ಪೂರ್ಣ ಸತ್ಯ ಹೊರಬರಲಿದೆ.

- Advertisement -
spot_img

Latest News

error: Content is protected !!