- Advertisement -
- Advertisement -
ಕಾಸರಗೋಡು: ಇಲ್ಲಿನ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿನ ಮಹಿಳೆಯೊಬ್ಬರು ಎಂಡೋಸಲ್ಫಾನ್ ಸಂತ್ರಸ್ಥೆ ಪುತ್ರಿಯನ್ನು ಕೊಲೆಗೈದು ತಾನು ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ.
ಎಂಡೋಸಲ್ಫಾನ್ ಸಂತ್ರಸ್ಥೆ ರೇಶ್ಮಾ ( 28)ಅವರನ್ನು ಆಕೆಯ ತಾಯಿ ಚಾಮುಂಡಿಕುನ್ನುವಿನ ವಿಮಲಕುಮಾರಿ ( 58) ಕೊಲೆಗೈದಿದ್ದು, ನಂತರದಲ್ಲಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ.
ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದ್ದು, ರಾಜಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -