Sunday, October 18, 2026
Homeತಾಜಾ ಸುದ್ದಿಪತಿಯ ಮುಂದೆಯೇ ಮಹಿಳೆಯ ಮೇಲೆರಗಿದ 17 ಮಂದಿ ನರ ರಾಕ್ಷಸರು

ಪತಿಯ ಮುಂದೆಯೇ ಮಹಿಳೆಯ ಮೇಲೆರಗಿದ 17 ಮಂದಿ ನರ ರಾಕ್ಷಸರು

- Advertisement -
- Advertisement -

ರಾಂಚಿ: ಪತಿಯ ಮುಂದೆಯೇ 17 ಮಂದಿ ಕಾಮುಕರು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಇನ್ನು ಸಂತ್ರಸ್ತ ಮಹಿಳೆ 5 ಮಕ್ಕಳ ತಾಯಿ. ಈಕೆ ಸಂಜೆ ವೇಳೆ ತನ್ನ ಪತಿ ಜೊತೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಆರೋಪಿಗಳು ದಾರಿ ತಪ್ಪಿಸಿದ್ದಾರೆ. ದಂಪತಿ ದಾರಿ ತಪ್ಪಿದ್ದರಿಂದ ಕಂಗಾಲಾಗಿದ್ದರು. ಇದೇ ವೇಳೆ ಆರೋಪಿಗಳು ಸ್ಥಳಕ್ಕೆ ಬಂದು ಪತಿ ಮೇಲೆ ದಾಳಿ ಮಾಡಿದ್ದಾರೆ. ಇತ್ತ ಮಹಿಳೆಯ ಮೇಲೆ 17 ಮಂದಿ ಕಾಮುಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇನ್ನು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!