Monday, May 6, 2024
Homeಚಿಕ್ಕಮಗಳೂರುಮಗನ ಪಬ್ ಜಿ ಆಟದ ಹುಚ್ಚಿಗೆ ತಾಯಿ ಬಲಿ: ಚಿಕ್ಕಮಗಳೂರಿನಲ್ಲೊಂದು ದಾರುಣ ಘಟನೆ

ಮಗನ ಪಬ್ ಜಿ ಆಟದ ಹುಚ್ಚಿಗೆ ತಾಯಿ ಬಲಿ: ಚಿಕ್ಕಮಗಳೂರಿನಲ್ಲೊಂದು ದಾರುಣ ಘಟನೆ

spot_img
- Advertisement -
- Advertisement -

ಚಿಕ್ಕಮಗಳೂರು: ಪುತ್ರನ ಪಬ್ ಜಿ ಗೇಮ್  ಹುಚ್ಚಿಗೆ ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು, ಮೈಮುನಾ (40) ಮೃತ ದುರ್ದೈವಿ. ಪಬ್ ಜಿ ಗೇಮ್ ಆಡದಂತೆ ಮಗನ ಜೊತೆ ತಂದೆ ಜಗಳ ನಡೆಸಿದ್ದು, ಆಟ ವಿರೋಧಿಸಿದ ಅಪ್ಪನ ಜೊತೆ ಮಗ ಜಗಳಕ್ಕಿಳಿದಿದ್ದ ಎನ್ನಲಾಗಿದೆ.

ಈ ವೇಳೆ ಸಾಯಿಸುತ್ತೇನೆಂದು ಮಗನಿಗೆ ತಂದೆ ಇಮ್ತಿಯಾಜ್ ಬಂದೂಕು ಹಿಡಿದಾಗ, ಮಗನಿಗೆ ಗುಂಡು ಹಾರಿಸುತ್ತಾರೆಂದು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ಆಗ ಮದ್ಯದ ಮತ್ತಿನಲ್ಲಿದ್ದ ಪತಿ ಇಮ್ತಿಯಾಜ್ ಪತ್ನಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಮೈಮುನಾ ಸಾವನ್ನಪ್ಪಿದ್ದಾರೆ.

 ಇಮ್ತಿಯಾಜ್ ಹಾಗೂ 17 ವರ್ಷದ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -
spot_img

Latest News

error: Content is protected !!