Wednesday, June 24, 2026
Homeಅಪರಾಧಮಗುವಿನೊಂದಿಗೆ ಶಾಲೆಯಿಂದ ಬರುವಾಗ ತಾಯಿಯ ಮೇಲೆ ದೌರ್ಜನ್ಯ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿರಾತಕನ ಕೃತ್ಯ!

ಮಗುವಿನೊಂದಿಗೆ ಶಾಲೆಯಿಂದ ಬರುವಾಗ ತಾಯಿಯ ಮೇಲೆ ದೌರ್ಜನ್ಯ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿರಾತಕನ ಕೃತ್ಯ!

- Advertisement -
- Advertisement -

ಹೈದರಾಬಾದ್‌ನಲ್ಲಿ ಮಗುವಿನೊಂದಿಗೆ ಶಾಲೆಯಿಂದ ಹಿಂದಿರುಗುತ್ತಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಲಾದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಹಗಲು ಹೊತ್ತಿನಲ್ಲಿ, ಮಗು ಹಿಡಿದುಕೊಂಡು ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ, ಹಿಂದಿನಿಂದ ಬಂದ ಯುವಕನೋರ್ವ ಆಕೆಯ ಬಟ್ಟೆಯನ್ನು ಸೊಂಟದವರೆಗೆ ಎತ್ತಿ ಹಿಡಿದು, ನಂತರದಲ್ಲಿ ಆ ಯುವಕ ಓಡಿ ಹೋದ ಘಟನೆ ನಡೆಸಿದ್ದು, ಈ ವಿಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸದ್ಯ ಮಹಿಳೆಯರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾಗಿದ್ದು, ಘಟನೆಯ ನಿಖರ ವಿವರ ಹಾಗೂ ಆರೋಪಿಗಳ ಗುರುತಿನ ಬಗ್ಗೆ ಪೊಲೀಸರು ಇನ್ನು ಅಧಿಕೃತ ಮಾಹಿತಿ ನೀಡಬೇಕಿದೆ.

- Advertisement -

Latest News

error: Content is protected !!