Tuesday, July 14, 2026
HomeUncategorizedತಾಯಿ ಮಗು ನಾಪತ್ತೆ- ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ತಾಯಿ ಮಗು ನಾಪತ್ತೆ- ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ತಾಯಿ ಹಾಗು ಮಗು ನಾಪತ್ತೆಯಾದ ಘಟನೆ ಮಾರ್ಚ್ 1ರಂದು ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ಎಂಬಲ್ಲಿ ನಡೆದಿದೆ. ಕಾಣೆಯಾದವರನ್ನು ರಶೀನಾ (30), ಹಾಗೂ ಮುಸೈಬ್ ಹಕ್ (5) ಎಂದು ಗುರುತಿಸಲಾಗಿದೆ.

ಆಕೆಯ ಪತಿ ಶಹಜಾದ್ ರವರ ದೂರಿನ ಪ್ರಕಾರ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ಎಂಬಲ್ಲಿಂದ ಬೆಳಿಗ್ಗೆ 09-30 ಗಂಟೆಗೆ ಪುತ್ತೂರಿಗೆ ಜೌಚದಿಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ ಸಣ್ಣ ಮಗ ಮುಸೈಬ್ ಹಕ್ (5) ಎಂಬಾತನನ್ನು ಜೊತೆಗೆ ಕರೆದುಕೊಂಡು ಮನೆಯಿಂದ ಹೊರಟು ಹೋದವರು ಮನೆಗೆ ವಾಪಸ್ ಬಾರದೆ ತಾಯಿ ಮನೆಗಾಗಲಿ ಗಂಡನ ಮನೆಗಾಗಲೀ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!