Thursday, May 2, 2024
Homeಕರಾವಳಿಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸ್ಪೆಷಲ್ ಟ್ರಾಫಿಕ್ ಡ್ರೈವ್ ಅಭಿಯಾನ; 900ಕ್ಕೂ ಹೆಚ್ಚು ವಾಹನಗಳಿಗೆ ದಂಡ

ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸ್ಪೆಷಲ್ ಟ್ರಾಫಿಕ್ ಡ್ರೈವ್ ಅಭಿಯಾನ; 900ಕ್ಕೂ ಹೆಚ್ಚು ವಾಹನಗಳಿಗೆ ದಂಡ

spot_img
- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳು ಸ್ಪೆಷಲ್ ಟ್ರಾಫಿಕ್ ಡ್ರೈವ್ ಅಭಿಯಾನದ ಭಾಗವಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಚಾಲಕರ ಮೇಲೆ ಮಂಗಳೂರು ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಈ ಅಭಿಯಾನದ ಭಾಗದಲ್ಲಿ 900 ವಾಹನಗಳ ವಿರುದ್ಧ ಕೇಸು ದಾಖಲಾಗಿದ್ದು, 4,50,000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳವಾರ ದೋಷಯುಕ್ತ , ನಿಗದಿತ ಮಾದರಿಯಲ್ಲಿ ಇರದ , ಫ್ಯಾನ್ಸಿ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದ ವಾಹನಗಳ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ವಾಹನಗಳಲ್ಲಿನ ಕಾನೂನು ಬಾಹಿರ ಟಿಂಟ್‌ಗಳನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದೆ. ರಸ್ತೆ ಅಪರಾಧ, ದರೋಡೆ ಸೇರಿದಂತೆ ಮಹಿಳೆಯರು, ಹಿರಿಯ ನಾಗರಿಕರ ಸುರಕ್ಷತೆಗೆ ಧಕ್ಕೆ ಬರುವಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.

ಅಕ್ಟೋಬರ್ 2ರವರೆಗೆ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!