Wednesday, June 3, 2026
Homeಕರಾವಳಿಮಂಗಳೂರುನಾಳೆಯ ಪ್ರಧಾನಿ ರೋಡ್ ಶೋನಲ್ಲಿ ಪುತ್ತೂರಿನಿಂದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ; ಪುತ್ತೂರು ಮಾಜಿ...

ನಾಳೆಯ ಪ್ರಧಾನಿ ರೋಡ್ ಶೋನಲ್ಲಿ ಪುತ್ತೂರಿನಿಂದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ; ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿಕೆ

- Advertisement -
- Advertisement -

ಪುತ್ತೂರು: ನಾಳೆಯ ಪ್ರಧಾನಿ ರೋಡ್ ಶೋನಲ್ಲಿ ಪುತ್ತೂರಿನಿಂದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿಕೆ ನೀಡಿದ್ದಾರೆ.


ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತೂರು ವಿಧಾನಸಭೆಯ ಎಲ್ಲಾ ಬೂತ್ ಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸ್ವ ಇಚ್ಛೆಯಿಂದ ತಮ್ಮ ತಮ್ಮ ವಾಹನದಲ್ಲಿ ಮಂಗಳೂರಿಗೆ ತೆರಳಲಿದ್ದಾರೆ. ಅಲ್ಲದೆ ತಾವೇ ಹಣ ಹೊಂದಿಸಿ ಬಸ್ ಮಾಡಿ ಮಂಗಳೂರಿಗೆ ಕಾರ್ಯಕರ್ತರು ತೆರಳಲಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 4 ಲಕ್ಷಕ್ಕೂ ಮಿಕ್ಕಿದ ಮತಗಳಲ್ಲಿ ಗೆಲ್ಲಿಸುವ ಕಾರ್ಯಕ್ರಮದ ಮುನ್ನುಡಿಯಾಗಲಿದ್ದು, ಕೇಂದ್ರದಲ್ಲಿ ಬಿಜೆಪಿ 400 ಕ್ಕೂ ಮಿಕ್ಕಿ ಸ್ಥಾನ ಗೆಲ್ಲಲಿದ್ದು,ಆ ಸ್ಥಾನಗಳಲ್ಲಿ ದಕ್ಷಿಣಕನ್ನಡ ಸ್ಥಾನವೂ ಒಂದಾಗಲಿದೆ ಎಂದರು.

ಕಾಂಗ್ರೆಸ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಲಿನ ಹತಾಶೆಯಲ್ಲಿದ್ದು, ಈವರೆಗೆ ಕಾಂಗ್ರೇಸ್ ಗೆ ಜಿಲ್ಲೆಯಲ್ಲಿ ಒಂದು ಜಿಲ್ಲಾ ಮಟ್ಟದ ಸಮಾವೇಶ ಮಾಡಲು ಸಾಧ್ಯವಾಗಿಲ್ಲ. ಪುತ್ತೂರಿನಲ್ಲಿ ಎಪ್ರಿಲ್ 16 ರಂದು ಮುಖ್ಯಮಂತ್ರಿ ಸಿದ್ಧಾರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ. ಸೋಲಿನ ಹತಾಶೆ ಕಾಂಗ್ರೇಸ್ ಅನ್ನು ಕಾಡುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!