Friday, June 27, 2025
Homeಕರಾವಳಿಮಂಗಳೂರುಮೂಡಬಿದ್ರೆ: ವೃದ್ಧೆಯ ಕುತ್ತಿಗೆಯಿಂದ ಸರ ಎಳೆದು ಕಳ್ಳತನ ಪ್ರಕರಣ: 44 ಪ್ರಕರಣದ ಆರೋಪಿ ಸಹಿತ ಇಬ್ಬರ...

ಮೂಡಬಿದ್ರೆ: ವೃದ್ಧೆಯ ಕುತ್ತಿಗೆಯಿಂದ ಸರ ಎಳೆದು ಕಳ್ಳತನ ಪ್ರಕರಣ: 44 ಪ್ರಕರಣದ ಆರೋಪಿ ಸಹಿತ ಇಬ್ಬರ ಬಂಧನ

spot_img
- Advertisement -
- Advertisement -

ಮೂಡಬಿದ್ರೆ: ವೃದ್ಧೆಯ ಕುತ್ತಿಗೆಯಿಂದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ  44 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ ಎನ್ನಲಾಗಿದೆ.

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ದಿನಾಂಕ 15-08-2024 ರಂದು ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಾಲ ಪಂಡಿತ್, ಪ್ರಾಯ: 70 ವರ್ಷ, ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಹಾಗೂ ದಿನಾಂಕ 02-09-2024 ರಂದು ಮೂಡಬಿದ್ರೆ ತಾಲೂಕು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿ ಪ್ರೇಮಾ, ಪ್ರಾಯ: 82 ವರ್ಷ ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಹೋದ ಬಗ್ಗೆ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ತನಿಖೆ ನಡೆಸಿದ ಪೊಲೀಸರು ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ, ಹಲವಾರು ದರೋಡೆ, ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಹಬೀಬ್ ಹಸನ್ (42), ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಾಗೂ ಉಮ್ಮರ ಸಿಯಾಫ್ (29) @ ಚಿಯಾ ಎಂಬಾತನನ್ನು ಬಂಧಿಸಿದ್ದಾರೆ.  

 ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,50,000/- ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ, ದಸ್ತಗಿರಿಯಾಗಿರುವ 1 ನೇ ಆರೋಪಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ಈ ವರೆಗೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಪ್ರಸ್ತುತ ಈತನು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ ಗಳಿದ್ದು, ಒಟ್ಟು 15 ದಸ್ತಗಿರಿ ವಾರೆಂಟ್ ನ್ಯಾಯಾಲಯವು ಹೊರಡಿಸಿರುತ್ತಾರೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಶ್ರೀ ಸಿದ್ಧಾರ್ಥ ಗೊಯಲ್ IPS (ಕಾ&ಸು), ಶ್ರೀ ದಿನೇಶ್ ಕುಮಾರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ್ಯ ACP ಶ್ರೀ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಶ್ರೀ ಪ್ರಶಾಂತ್ ಎ.ಎಸ್.ಐ, ಶ್ರೀ ಮೋಹನ್ ದಾಸ್ ಕೋಟ್ಯಾನ್ ಎ.ಎಸ್.ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್ , ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ಆರೋಪಿ ಹಬೀಬ್ ವಿರುದ್ಧ ದಾಖಲಾಗಿರುವ ಪ್ರಕರಣಗಳು

1. ಮಂಗಳೂರು ಬಜೈ ಪೊಲೀಸ್ ಠಾಣೆ ಮೊ.ಸಂ.185/2010 ಕಲಂ 395 ಭಾದಸಂ

2. ಮಂಗಳೂರು ಬಟ್ಟೆ ಪೊಲೀಸ್ ಠಾಣೆ ಮೊ.ಸಂ.124/2018 ಕಲಂ 392 411 ಭಾದಸಂ

3. ಮಂಗಳೂರು ಬಪ್ಪೆ ಪೊಲೀಸ್ ಠಾಣೆ ಮೊ.ಸಂ.24/2017 ಕಲಂ 392 ಭಾದಸಂ

4. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.231/2010 ಕಲಂ 379 ಭಾದಸಂ

5. ಉಳ್ಳಾಲ ಪೊಲೀಸ್ ಠಾಣೆ 353/2014 800 457, 380 ಭಾದಸಂ

6. ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.42/2015 ಕಲಂ 379 ಭಾದಸಂ.

7. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.10/2015 ಕಲಂ 379 ಭಾದಸಂ

8. ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.17/2015 ಕಲಂ 379 ಭಾದಸಂ

9. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.192/2015 ಕಲಂ 401, 379 ಭಾದಸಂ

10. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.116/2016 ಕಲಂ 457, 380 ಜೊತೆಗೆ 34 ಭಾದಸಂ.

11. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.353/2014 ಕಲಂ 457, 380 ಭಾದಸಂ.

12. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.188/2017 ಕಲಂ 402, 399 ಭಾದಸಂ

13. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.298/2014 ಕಲಂ 379 ಭಾದಸಂ

14. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ 392 ಭಾದಸಂ

15. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.88/2017 ಕಲಂ 399 ಭಾದಸಂ

16. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.121/2017 ಕಲಂ 457, 380 ಭಾದಸಂ

17. ಮಂಗಳೂರು ಬರ್ಕೆ ಪೊಲೀಸ್ ಠಾಣೆ ಮೊ.ಸಂ.93/2015 ಕಲಂ 302 ಭಾದಸಂ

18. ಮಂಗಳೂರು ಮೂಲ್ಕಿ ಪೊಲೀಸ್ ಠಾಣೆ ಮೊ.ಸಂ.124/2018 ಕೋಡ್ 457,380 ಭಾದಸಂ

19. ಮಂಗಳೂರು ಮೂಲ್ಕಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ 392 ಭಾದಸಂ

20. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.26/2015 ಕಲಂ 457, 380 ಭಾದಸಂ

21. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.121/2017 ಕಲಂ 457, 380 ಭಾದಸಂ

22. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.251/2017 ಕಲಂ 392 ಜೊತೆಗೆ 34 ಬಡಸಂ

23. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.145/2013 ಕಲಂ 379 ಭಾದಸಂ.

24. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.155/2013 ಕಲಂ 379 ಭಾದಸಂ.

25. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.72/2015 ಕಲಂ 392 ಭಾದಸಂ.

26. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ. 164/2017 ಕೋಡ್ 392,414, ಭಾದಸಂ

27. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.97/2017 ಕಲಂ 392 ಜೊತೆಗೆ 34 ಭದನಂ.

28. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.99/2018 ಕಲಂ 392 ಭಾದಸಂ.

29. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.95/2019 ಕಲಂ 392 ಜೊತೆಗೆ 34 ಭಾದಸಂ.

30. ಮಲ್ಪೆ ಪೊಲೀಸ್ ಠಾಣೆ ಮೊ no 58/2019 00 394, 397,414, ở 34 ಭಾದಸಂ

31. ಮಲ್ಪೆ ಪೊಲೀಸ್ ಠಾಣೆ ಮೊ.ಸಂ.73/2017 ಕಲಂ 394, ಜೊತೆಗೆ 34 ಭಾದಸಂ.

32. ಶಿರ್ವಾ ಪೊಲೀಸ್ ಠಾಣೆ ಮೊ.ಸಂ. 48/2018 ಕಲಂ 392, ಜೊತೆಗೆ 34 ಭಾದಸಂ

33. ಮೂಡುಬಿದಿರೆ ಪೊಲೀಸ್ ಠಾಣೆ ಮೊ.ಸಂ.298/2018 ಕಲಂ 392 ಭಾದಸಂ

34. 34. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮೊ.ಸಂ.271/2014 ಕಲಂ 394 ಭಾದಸಂ

35. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮೊ.ಸಂ.151/2014 ಕಲಂ 379 ಭಾದಸಂ

36. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.246/2015 ಕಲಂ 379 ಭಾದಸಂ

37. ಮಂಗಳೂರು ಉತ್ತರ ಪೊಲೀಸ್ ಠಾಣೆ ಮೊ.ಸಂ.94/2020 ಕಲಂ 379 ಭಾದಸಂ

38. ಮಂಗಳೂರು ಉತ್ತರ ಪೊಲೀಸ್ ಠಾಣೆ ಮೊ.ಸಂ.95/2020 ಕಲಂ 379 ಭಾದಸಂ.

39. ಕಾರ್ಕಳ ನಗರ ಪೊಲೀಸ್ ಠಾಣೆ ಮೊ ನಂ.119/2019 ಕಲಂ 392 ಜೊತೆಗೆ 34 ಭಾದಸಂ

40. ಉಡುಪಿ ನಗರ ಪೊಲೀಸ್ ಠಾಣೆ ಮೊ. 31/2015 ಕಲಂ 307 ಜೊತೆಗೆ 34 ಭಾದಸಂ

41. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 57/2023 ಕಲಂ 394 ಭಾದಸಂ

42. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 75/2023 ಕಲಂ 379 ಭಾದಸಂ

43. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 148/2024 ಕಲಂ 304 ಬಿ.ಎನ್.ಎಸ್

44. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 165/2024 ಕಲಂ 304 ಬಿ.ಎನ್.ಎಸ್

- Advertisement -
spot_img

Latest News

error: Content is protected !!