- Advertisement -
- Advertisement -
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿ, ನಟ ದರ್ಶನ್ ಪರ ವಕೀಲರು ಸೆ.21 ಶನಿವಾರದಂದು ಕೊನೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಂಧನವಾಗಿ ನೂರು ದಿನ ಕಳೆದ ಬಳಿಕ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಸೆಲ್ ನಲ್ಲಿರುವ ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಅಡಿ ಪೋನ್ ಕರೆ ಮೂಲಕ ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ವಕೀಲರಿಂದ ಮಾಹಿತಿ ಪಡೆದಿರುವ ಬಗ್ಗೆ ವರದಿಯಾಗಿದೆ ಎನ್ನಲಾಗಿದೆ.
ಅರ್ಜಿಯ ವಿಚಾರಣೆಯನ್ನು ಸೆ.23 ಸೋಮವಾರದಂದು ಮುಂದೂಡಲಾಗಿದೆ. ಪ್ರಕರಣದ ಆರೋಪಿ ನಂಬರ್ 1 ಪವಿತ್ರಾ ಗೌಡ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
- Advertisement -