- Advertisement -
![]()
- Advertisement -
ಮೂಡಬಿದರೆ; ಖಾಸಗಿ ಬಸ್ ಗಳ ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತವಾಗಿ ತಾಯಿ ಮಗಳಿಗೆ ಗಾಯಗಳಾಗಿರುವ ಘಟನೆ ಮೂಡಬಿದ್ರೆಯ ಹಂಡೇಲು ಬಳಿ ನಡೆದಿದೆ.
ಮಾಸ್ಟರ್ ಎಂಬ ಹೆಸರಿನ ಬಸ್ ಮೂಡಬಿದಿರೆಯಿಂದ ಮಂಗಳೂರಿನತ್ತ ತೆರಳುತ್ತಿತ್ತು. ತೋಡಾರ್ ಮೈಟ್ ಕಾಲೇಜು ಎದುರು ಕಾಲೇಜು ಬಸ್ಸೊಂದನ್ನು ಓವರ್ ಟೇಕ್ ಮಾಡಲು ಬಸ್ ಚಾಲಕ ಅತೀ ವೇಗದಿಂದ ಬಸ್ಸನ್ನು ಓಡಿಸಿದ್ದು ಕಾಲೇಜ್ ಬಸ್ ಗೆ ಢಿಕ್ಕಿ ಹೊಡೆದಿದೆ. ಬಳಿಕ ಎದುರಿನಲ್ಲಿ ಬರುತ್ತಿದ್ದ ತಾಯಿ ಮತ್ತು ಮಗಳಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಸ್ಕೂಟಿಯು ಅದರ ಎದುರಿನಲ್ಲಿದ್ದ ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ತಾಯಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು ಮಗಳಿಗೆ ಮಗಳಿಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದ ತಕ್ಷಣವೇ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ .ಇನ್ನು ಚಾಲಕನ ನಿರ್ಲಕ್ಷ್ಯದ ಚಾಲನೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು.
- Advertisement -


