Wednesday, June 3, 2026
Homeತಾಜಾ ಸುದ್ದಿಮಂಗಳೂರು: ಮಂಕಿಪಾಕ್ಸ್‌ ಪ್ರಕರಣ: ಇನ್ನಿಬ್ಬರು ಪ್ರಯಾಣಿಕರ ಗುರುತು ಪತ್ತೆ

ಮಂಗಳೂರು: ಮಂಕಿಪಾಕ್ಸ್‌ ಪ್ರಕರಣ: ಇನ್ನಿಬ್ಬರು ಪ್ರಯಾಣಿಕರ ಗುರುತು ಪತ್ತೆ

- Advertisement -
- Advertisement -

ಮಂಗಳೂರು: ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟ ಬೆನ್ನಲ್ಲೇ ದ.ಕ. ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ಜುಲೈ 16ರಂದು ಯುಎಇ ಯಿಂದ ವಿಮಾನದಲ್ಲಿ ಆಗಮಿಸಿ ಕೇರಳಕ್ಕೆ ಹೋಗಿದ್ದ ವಿಚಾರಕ್ಕೆ ಸಂಬಂಧಿಸಿ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕರಲ್ಲಿ ಆತನ ಹಿಂದಿನ ಮೂರು ಹಾಗೂ ಮುಂದಿನ ಮೂರು ಆಸನಗಳಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಐಸೊಲೇಶನ್‌ಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಸದ್ಯ 9 ಮಂದಿ ಐಸೊಲೇಶನ್‌ನಲ್ಲಿದ್ದು, ಉಳಿದಂತೆ ಇಬ್ಬರ ವಿಳಾಸ ಆರೋಗ್ಯ ಇಲಾಖೆಗೆ ಸಿಕ್ಕಿರಲಿಲ್ಲ. ಇದೀಗ ಅವರ ವಿಳಾಸ ದೊರಕಿದ್ದು, ಅವರು ಕೇರಳ ಮೂಲದವರು ಎಂದು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!