Saturday, June 28, 2025
Homeತಾಜಾ ಸುದ್ದಿವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ...

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆ

spot_img
- Advertisement -
- Advertisement -

ರಾಯಚೂರು: ಇಡಿ ಅಧಿಕಾರಿಗಳಿಗೆ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮೂಲದ ಕುರಿತ ಮಹತ್ವದ ದಾಖಲೆಗಳು ದೊರಕಿದ್ದು, ಬಂಧಿತ ಮಾಜಿ ಸಚಿವ ನಾಗೇಂದ್ರನ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. 

ಮಾಜಿ ಸಚಿವ ನಾಗೇಂದ್ರನ ಆಪ್ತ ಸಹಾಯಕ ನೆಕ್ಕಂಟಿ‌ ನಾಗರಾಜ್ ಅಕೌಂಟ್ ಮೂಲಕವೇ ಇತರರ ಅಕೌಂಟಿಗೆ ಹಣ ಜಮಾಗೊಂಡಿರುವ ದಾಖಲೆಗಳು ಬಯಲಾಗಿದೆ. ಸಿಂಧನೂರನ ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮಿ, ರತ್ನಕುಮಾರಿ, ಹಾಗೂ ಮೊಮ್ಮಗ‌ ಎಲ್. ಸುನೀಲನ ಅಕೌಂಟಿಗೆ ಹಣ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. 

ಕೋನಾ ವೆಂಕಟರಾವ್ ರೆಡ್ಡಿ ಅಕೌಂಟಿಗೆ 12 ಲಕ್ಷ, ಪುತ್ರಿ ಲಕ್ಕಂಸಾನಿ ಲಕ್ಷ್ಮಿ ಅಕೌಂಟಿಗೆ 25 ಲಕ್ಷ, ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ, ಮೊಮ್ಮಗ ಸುನೀಲ್ ಅಕೌಂಟಿಗೆ 36 ಲಕ್ಷ ಜಮಾಗೊಂಡಿದೆ. ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ ಇವರ ಇಡೀ ಕುಟುಂಬಕ್ಕೆ ಒಟ್ಟು 98 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಬೂದಿಹಾಳ ಕ್ಯಾಂಪ್ ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿವೆ ವೆಂಕಟರಾವ್ ರೆಡ್ಡಿ ಕುಟುಂಬದವರ ಅಕೌಂಟ್ ಗಳಿವೆ ಎಂದು ತಿಳಿದು ಬಂದಿದೆ.

ಇನ್ನು ಈ ನಿಟ್ಟಿನಲ್ಲಿಯೇ ಈ ನಾಲ್ಕು ಮಂದಿಯ ಖಾತೆಯನ್ನು ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದ ಇಡಿ ಅಧಿಕಾರಿಗಳೇ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ನಾಲ್ವರ ಅಕೌಂಟ್ ಅನ್ನು ಸೀಜ್ ಮಾಡಿದ್ದಾರೆ. ಕಮಿಷನ್ ಆಸೆ ತೋರಿಸಿ ಮಾ.8ರಂದು ಈ ನಾಲ್ವರ ಅಕೌಂಟ್ ಗೆ ಹಣ ಜಮಾ ಮಾಡಲಾಗಿದೆ. ಇನ್ನು ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡದಂತೆ ಇಡಿ ಅಧಿಕಾರಿಗಳು ತಡೆ ಇಡಿದಿದ್ದಾರೆ.   

- Advertisement -
spot_img

Latest News

error: Content is protected !!