Friday, June 5, 2026
Homeಕರಾವಳಿಉಡುಪಿಡಾ. ಟಿ.ಎಂ.ಎ. ಪೈ ಫೌಂಡೇಷನ್ ಅಧ್ಯಕ್ಷ ಮೋಹನ್ ದಾಸ್ ಪೈ ನಿಧನ

ಡಾ. ಟಿ.ಎಂ.ಎ. ಪೈ ಫೌಂಡೇಷನ್ ಅಧ್ಯಕ್ಷ ಮೋಹನ್ ದಾಸ್ ಪೈ ನಿಧನ

- Advertisement -
- Advertisement -

ಮಣಿಪಾಲ: ಮಣಿಪಾಲದ ಟಿ. ಮೋಹನ್ ದಾಸ್ ಎಂ. ಪೈ ನಿಧನರಾಗಿದ್ದಾರೆ.

ಡಾ. ಟಿ.ಎಂ.ಎ ಪೈ ಅವರ ಹಿರಿಯ ಪುತ್ರರಾಗಿದ್ದ ಮೋಹನ್ ದಾಸ್ ಪೈ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಮೋಹನ್ ದಾಸ್ ಪೈ ನಿಧನರಾಗಿದ್ದಾರೆ.

ಡಾ. ಟಿ.ಎಂ.ಎ. ಪೈ ಫೌಂಡೇಶನ್ – ಎಂಜಿಎಂ ಕಾಲೇಜು ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಮೋಹನ್ ದಾಸ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೋಹನ್ ದಾಸ್ ಪೈ ನಿಧನದ ಹಿನ್ನೆಲೆಯಲ್ಲಿ ನಾಳೆ ಡಾ. ಟಿ.ಎಂ.ಎ. ಪೈ ಫೌಂಡೇಶನ್ ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

- Advertisement -

Latest News

error: Content is protected !!