Saturday, June 6, 2026
Homeಕರಾವಳಿಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ಮೋದಿ ಚಿತ್ರ ತೆಗೆಯಬೇಕು ಎಂದು ಹೇಳಿದವನಿಗೆ ಒಂದು ಲಕ್ಷ ರೂಪಾಯಿ...

ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ಮೋದಿ ಚಿತ್ರ ತೆಗೆಯಬೇಕು ಎಂದು ಹೇಳಿದವನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಮುಂದಾದ ಕೇರಳ ಹೈಕೋರ್ಟ್..!

- Advertisement -
- Advertisement -

ಕೇರಳ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ಮೋದಿ ಚಿತ್ರ ತೆಗೆಯಬೇಕು ಎಂದು ಒತ್ತಾಯಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವನಿಗೆ ಕೇರಳ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಆದೇಶಿಸಿದೆ.

ಕಡತ್ತುರತ್ತಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಪೀಟರ್ ಎಂಬಾತನಿಗೆ ಕೇರಳ ಹೈಕೋರ್ಟ್ ನ್ಯಾಯಾಧೀಶ ಪಿ.ವಿ.ಕುಞಕೃಷ್ಣನ್ ದಂಡ ವಿಧಿಸಿದ್ದಾರೆ. ಕೋವಿಡ್ ಲಸಿಕೆ ಪಡೆದವರಿಗೆ ಸರಕಾರ ನೀಡುವ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರವಿದ್ದು ಇದು ತನಗೆ ಹೇಸಿಗೆ ಉಂಟು ಮಾಡುತ್ತಿದೆ ಎಂದು ಪೀಟರ್ ದೂರಿದ್ದರು. ಆದರೆ ಇದನ್ನು ಹೈಕೋರ್ಟ್ ತಿರಸ್ಕರಿಸಿದೆ.

ಅರ್ಜಿದಾರನಾದ ಪೀಟರ್ ಜವಾಹರ್ ಲಾಲ್ ನೆಹರು ಹೆಸರಿನ ಕಾಲೇಜಲ್ಲಿ ವ್ಯಾಸಂಗ ಮಾಡಿದ್ದರು. ಆ ವೇಳೆ ತಮಗೆ ಹೇಸಿಗೆ ಉಂಟಾಗಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಕೋವಿಡ್ ವಿರುದ್ಧ ಹೋರಾಡುವ ಸಾವಿರಾರು ಮಂದಿಗೆ ಇನ್ನಷ್ಟು ಹುರುಪು ನೀಡಲು ಪ್ರಧಾನಮಂತ್ರಿ ಚಿತ್ರ ಹಾಕಲಾಗಿದೆ. ನಮ್ಮ ಪ್ರಧಾನಮಂತ್ರಿ ಚಿತ್ರ ನಮಗೇ ಹೇಸಿಗೆ ಉಂಟಾದರೆ ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. “ರಾಜಕೀಯ ಉದ್ದೇಶದಿಂದ” ಅರ್ಜಿದಾರರು ಮನವಿ ಸಲ್ಲಿಸಿರುವುದರಿಂದ ಅ

- Advertisement -

Latest News

error: Content is protected !!