Friday, May 3, 2024
Homeತಾಜಾ ಸುದ್ದಿಲೋಕಸಭೆ ಚುನಾವಣೆಯಲ್ಲಿ 'ಮ್ಯಾಚ್ ಫಿಕ್ಸಿಂಗ್'ಗೆ ಮೋದಿ ಯತ್ನ; ರಾಹುಲ್ ಗಾಂಧಿ ಆರೋಪ

ಲೋಕಸಭೆ ಚುನಾವಣೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’ಗೆ ಮೋದಿ ಯತ್ನ; ರಾಹುಲ್ ಗಾಂಧಿ ಆರೋಪ

spot_img
- Advertisement -
- Advertisement -

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಮ್ಯಾಚ್ ಫಿಕ್ಸಿಂಗ್” ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಪ್ರತಿಪಕ್ಷಗಳ ‘INDIA’ ಒಕ್ಕೂಟವು ರಾಷ್ಟ್ರ ರಾಜಧಾನಿಯಲ್ಲಿ ಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ರ‍್ಯಾಲಿಯಲ್ಲಿ ಈ ಕುರಿತು ಮಾತನಾಡಿದರು.

‘ನೀವು ಒಗ್ಗಟ್ಟಾಗಿ ಮತ ಚಲಾಯಿಸದಿದ್ದರೆ ಮೋದಿಯವರ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾಗುತ್ತದೆ. ಅದು ಯಶಸ್ವಿಯಾದರೆ, ಸಂವಿಧಾನ ನಾಶವಾಗುತ್ತದೆ. ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷ, ಅದರ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ,’ ಎಂದು ಅವರು ಪ್ರಶ್ನಿಸಿದರು.

‘ಬಿಜೆಪಿ ಸಂಸದರೊಬ್ಬರು ನಾವು 400 ಸ್ಥಾನಗಳನ್ನು ಪಡೆದಾಗ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದರು. ಇದು ಅವರ ಅಜೆಂಡಾದ ಭಾಗವೇ ಆಗಿದೆ. ಸಂವಿಧಾನವು ಜನರ ಧ್ವನಿಯಾಗಿದೆ ಮತ್ತು ಅದು ಮುಗಿದ ದಿನ, ದೇಶವು ಕೊನೆಗೊಳ್ಳುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದರು,’ ಎಂದರು

- Advertisement -
spot_img

Latest News

error: Content is protected !!