Saturday, July 25, 2026
Homeತಾಜಾ ಸುದ್ದಿಒಂದೇ ರಾತ್ರಿಯಲ್ಲಿ 11 ಲಕ್ಷ ಫಾಲೋವರ್ಸ್ ಹೆಚ್ಚಳ: 'ಜೆನ್-ಝಡ್' ಶೈಲಿಯ ವಿಡಿಯೋ ಮೂಲಕ ಪ್ರಧಾನಿ ಮೋದಿ...

ಒಂದೇ ರಾತ್ರಿಯಲ್ಲಿ 11 ಲಕ್ಷ ಫಾಲೋವರ್ಸ್ ಹೆಚ್ಚಳ: ‘ಜೆನ್-ಝಡ್’ ಶೈಲಿಯ ವಿಡಿಯೋ ಮೂಲಕ ಪ್ರಧಾನಿ ಮೋದಿ ಹೊಸ ದಾಖಲೆ!

- Advertisement -
- Advertisement -

ನವದೆಹಲಿ:ನೀಟ್ ಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ ದೇಶದ ಯುವಜನತೆಯನ್ನು ನೇರವಾಗಿ ತಲುಪಲು ಪ್ರಧಾನಿ ನರೇಂದ್ರ ಮೋದಿ ಕಂಡುಕೊಂಡ ವಿಭಿನ್ನ ಹಾದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಬುಧವಾರ ಮಧ್ಯರಾತ್ರಿ ಯಾವುದೇ ಅಧಿಕೃತ ಸ್ಟುಡಿಯೋ ಅಥವಾ ಹೈ-ಟೆಕ್ ಸೆಟಪ್ ಇಲ್ಲದೆ, ತಮ್ಮ ಮೊಬೈಲ್ ಸೆಲ್ಫಿ ಕ್ಯಾಮೆರಾ ಮೂಲಕವೇ ನೇರವಾಗಿ ಮಾತನಾಡಿ ವಿಡಿಯೋ ಹಂಚಿಕೊಂಡಿದ್ದ ಪ್ರಧಾನಿ, ‘ಜೆನ್-ಝಡ್’ ಶೈಲಿಯಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವಿಡಿಯೋ ಅಪ್‌ಲೋಡ್ ಆದ ಕೇವಲ ಒಂದೇ ರಾತ್ರಿಯಲ್ಲಿ ಪ್ರಧಾನಿಯವರ ಇನ್‌ಸ್ಟಾಗ್ರಾಮ್ ಖಾತೆಗೆ ಬರೊಬ್ಬರಿ 1.1 ಮಿಲಿಯನ್ (11 ಲಕ್ಷ) ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

ವಿಡಿಯೋ ಪೋಸ್ಟ್ ಮಾಡುವ ಮುನ್ನ 101 ಮಿಲಿಯನ್ ಇದ್ದ ಅವರ ಫಾಲೋವರ್ಸ್ ಸಂಖ್ಯೆ, ಇದೀಗ 102 ಮಿಲಿಯನ್ ಗಡಿ ದಾಟಿದೆ. ವಿವಾದಗಳ ನಡುವೆಯೂ ಪ್ರಧಾನಿ ಮೋದಿಯವರ ಈ ಡಿಜಿಟಲ್ ಹೆಜ್ಜೆ ಮತ್ತು ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

- Advertisement -

Latest News

error: Content is protected !!