Wednesday, June 3, 2026
Homeಕರಾವಳಿಸುಳ್ಯ; ಜಾಲ್ಸೂರಿನಲ್ಲಿ ಅಂಗಡಿಯಲ್ಲಿ ಇಟ್ಟಿದ್ದ ಮೊಬೈಲ್ ಎಗರಿಸಿದ ಖದೀಮ; ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸುಳ್ಯ; ಜಾಲ್ಸೂರಿನಲ್ಲಿ ಅಂಗಡಿಯಲ್ಲಿ ಇಟ್ಟಿದ್ದ ಮೊಬೈಲ್ ಎಗರಿಸಿದ ಖದೀಮ; ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಸುಳ್ಯ; ಅಂಗಡಿಯಲ್ಲಿ ಇರಿಸಿದ್ದ ಮೊಬೈಲ್ ನ್ನು ಕಳ್ಳನೊಬ್ಬ ಎಗರಿಸಿರುವ ಘಟನೆ ಜಾಲ್ಸೂರಿನಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆಯ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಜಾಲ್ಸೂರಿನ ಶ್ರೀನಿವಾಸ್ ಕಾಂಪ್ಲೆಕ್ಸ್ ನಲ್ಲಿರುವ ದೇವಪ್ಪ ಎಂಬವರ ಅಂಗಡಿಗೆ ಬಂದಿದ್ದಾನೆ. ಹೀಗೆ ಬಂದವನು ವಸ್ತುಗಳ ರೇಟ್ ವಿಚಾರಿಸುತ್ತಾ ಅಲ್ಲೇ ಟೇಬಲ್ ಮೇಲೆ ಇರಿಸಿದ್ದ ಮೊಬೈಲ್ ನ್ನು ಎಗರಿಸಿದ್ದಾನೆ.

ಇನ್ನು ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದ್ದು, ಅಂಗಡಿಯವರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!