Saturday, April 27, 2024
Homeಕರಾವಳಿಮೊಬೈಲ್ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

ಮೊಬೈಲ್ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

spot_img
- Advertisement -
- Advertisement -

ಬೆಳ್ತಂಗಡಿ:  ಲಾಕ್ ಡೌನ್ ನಿಂದಾಗಿ ಬೆಳ್ತಂಗಡಿ ತಾಲೂಕಿನಲ್ಲಿ  65ಕ್ಕೂ ಹೆಚ್ಚು ಮೊಬೈಲ್  ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು ಗ್ರಾಹಕರು ಪರದಾಡುವಂತಾಗಿದೆ. ಅಲ್ಲದೇ ಮೊಬೈಲ್ ಗಳು ಹಾಳಾದರೆ ರಿಪೇರಿ ಮಾಡಿಸೋದಕ್ಕೂ ಸಾಧ್ಯವಾಗದೇ ಎಷ್ಟೋ ಮಕ್ಕಳಿದೆ ಆನ್ ಲೈನ್ ತರಗತಿಗಳಿಗೆ ತೊಂದರೆಯಾಗುತ್ತಿದೆ. ರಿ ಚಾರ್ಜ್ ಮಾಡೋದಕ್ಕೂ ಸಾಧ್ಯವಾಗದೇ ಪರದಾಡುವಂತಾಗಿದೆ. ಮತ್ತೊಂದು ಕಡೆ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಗೆ ಅವಕಾಶ ಕೊಟ್ಟು ಮೊಬೈಲ್ ಅಂಗಡಿ ಮಾಲೀಕರಿಗೆ ಅನ್ಯಾಯವಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮೊಬೈಲ್ ಅಂಗಡಿಗಳ ಮಾಲೀಕರ ಪರವಾಗಿ ಬೆಳ್ತಂಗಡಿ ತಾಲೂಕು ಮೊಬೈಲ್ ರೆಟೈಲರ್ಸ್  ಯೂನಿಯನ್ ಅಧ್ಯಕ್ಷರಾದ ವೀರಚಂದ್ರ ಜೈನ್, ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ಳಿಗೆ 10 ಗಂಟೆ ಯ ತನಕ ಮೊಬೈಲ್ ಶಾಪ್ ತೆರೆಯಲು  ಅವಕಾಶ ಕೊಡಬೇಕಾಗಿ ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆ ತಾಲೂಕಿನ ಯುವ ಜನತೆ ನಿಮ್ಮ ಮಾತನ್ನು ಕೇಳುವುದರಿಂದ ಆನ್ ಲೈನ್ ಖರೀದಿಯನ್ನು ಕಮ್ಮಿ ಮಾಡಿ ಹತ್ತಿರದ ಅಂಗಡಿಯಿಂದ ಖರೀದಿ ಮಾಡುವಂತೆ ಮನವಿ ಮಾಡಿಕೊಂಡು ಒಂದು ಅಭಿಯಾನ ಮಾಡಿದರೆ ಮೊಬೈಲ್ ಮಾರಾಟಗಾರರಿಗೆ ಅಲ್ಲ ಎಲ್ಲಾ ವರ್ತಕರಿಗೂ ಉಪಯೋಗ ಆಗುವುದು ಹಾಗೂ ಸರಕಾರದಿಂದ ಮೊಬೈಲ್ ವರ್ತಕರ ಬಿಸಿನೆಸ್ ಲೋನ್ ಇಎಂಐಯನ್ನು 3 ತಿಂಗಳ ಮಟ್ಟಿಗೆ ಯಾವುದೇ ಬಡ್ಡಿ ಹಾಕದೆ  ಮುಂದೆ ಹಾಕುವಂತೆ ಸರಕಾರವನ್ನು  ಒತ್ತಾಯಿಸಬೇಕಾಗಿ ಹಾಗೂ ಎಲ್ಲಾ ಮೊಬೈಲ್ ಅಂಗಡಿ ಮಾಲೀಕರು ಮತ್ತು ನೌಕರರಿಗೆ ವಾಕ್ಸಿನೇಷನ್ ಗೆ ಅರೋಗ್ಯ ಅಧಿಕಾರಿಗಳಲ್ಲಿ ಸಂಘದಿಂದ ಅರ್ಜಿ ಕೊಟ್ಟು 1 ವಾರ ಕಳೆದಿದ್ದರು, ಇನ್ನು ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ಸಕಾರಾತ್ಮಕ ಉತ್ತರ ಬಾರದೇ ಇರುವ ಕಾರಣ ಆದಷ್ಟು ಬೇಗ ವ್ಯಾಕ್ಸಿನೇಶನ್  ಕೊಡಿಸಬೇಕಾಗಿ ಮನವಿ ಮಾಡಿದ್ದಾರೆ.  

- Advertisement -
spot_img

Latest News

error: Content is protected !!