Saturday, June 6, 2026
Homeಕರಾವಳಿಕೇರಳದಲ್ಲಿ ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲೇ ಮೊಬೈಲ್ ಸ್ಫೋಟ

ಕೇರಳದಲ್ಲಿ ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲೇ ಮೊಬೈಲ್ ಸ್ಫೋಟ

- Advertisement -
- Advertisement -

ಕೇರಳ; ವ್ಯಕ್ತಿಯೋರ್ವರ ಶರ್ಟ್ ಜೇಬಿನಲ್ಲೇ ಮೊಬೈಲ್ ಸ್ಫೋಟಗೊಂಡ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.

70 ವರ್ಷದ  ಇಲಿಯಾಸ್ ಎಂಬ ವ್ಯಕ್ತಿ ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದರು. ಆಗ ಅವರ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ದಿಢೀರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿ ಅಂಗಡಿಯಲ್ಲಿನ ಟೇಬಲ್‌ನಲ್ಲಿ ಕುಳಿತು ಚಹಾ ಸೇವಿಸುವುದನ್ನು ನೋಡಬಹುದು.ಈ ವೇಳೆ ಅವನ ಶರ್ಟ್ ಜೇಬಿನಲ್ಲಿರುವ ಫೋನ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವ್ಯಕ್ತಿ ತನ್ನ ಜೇಬಿನಿಂದ ಮೊಬೈಲ್‌ ಫೋನ್ ನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.ಬಳಿಕ ಅಲ್ಲಿದ್ದವರು ಓಡಿ ಬಂದು ಶರ್ಟ್ ನ ಬೆಂಕಿ ನಂದಿಸಿದ್ದಾರೆ. ವ್ಯಕ್ತಿ ಈ ಮೊಬೈಲ್‌ ಅನ್ನು ವರ್ಷದ ಹಿಂದೆ 1000 ರೂ.ಗೆ ಖರೀದಿಸಿದ್ದರು‌ ಎನ್ನಲಾಗಿದೆ.ಇದೀಗ ಮೊಬೈಲ್ ಸ್ಪೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಒಂದೇ ವಾರದಲ್ಲಿ ಇದು ಕೇರಳದಲ್ಲಿ‌ ನಡೆದ ಎರಡನೇ ಪ್ರಕರಣವಾಗಿದೆ. ಕೋಝಿಕ್ಕೋಡ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ವ್ಯಕ್ತಿಯೊಬ್ಬರಿಗೆ ಸುಟ್ಟಗಾಯಗಳಾಗಿದ್ದವು.

- Advertisement -

Latest News

error: Content is protected !!