Thursday, June 4, 2026
Homeಕರಾವಳಿಸುಳ್ಯ;  ಬೆಳ್ಳಾರೆಯಲ್ಲಿ ಮೋದಿ ಯೋಜನೆಯಲ್ಲಿ 1 ಲಕ್ಷ ರೂ ಸಿಗುವುದಾಗಿ ಹೇಳಿ ವಂಚನೆ

ಸುಳ್ಯ;  ಬೆಳ್ಳಾರೆಯಲ್ಲಿ ಮೋದಿ ಯೋಜನೆಯಲ್ಲಿ 1 ಲಕ್ಷ ರೂ ಸಿಗುವುದಾಗಿ ಹೇಳಿ ವಂಚನೆ

- Advertisement -
- Advertisement -

ಸುಳ್ಯ: ಮೋದಿ ಯೋಜನೆಯಲ್ಲಿ ಲಕ್ಷ ರೂ ಸಿಗುವುದಾಗಿ ನಂಬಿಸಿ ಇಬ್ಬರಿಂದ ತಲಾ ಎರಡು ಸಾವಿರ ರೂ ಪಡೆದುಕೊಂಡು  ಮಧ್ಯವಯಸ್ಕನೊಬ್ಬ ಪರಾರಿಯಾಗಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ನಡೆದಿದೆ.

hಈತ ಬೆಳ್ಳಾರೆ ಪೇಟೆಯಲ್ಲಿ ತಿರುಗಾಡುತ್ತಿರುವ ದೃಶ್ಯ ಸಿ.ಸಿ.ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

 ಕಳೆದ ಕೆಲವು ದಿನಗಳ ಹಿಂದೆ   ಅಡೂರು ಭಾಗದಲ್ಲಿ ಒಬ್ಬ ವೃದ್ದ ವ್ಯಕ್ತಿಯ ಬಳಿಗೆ ಬಂದಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ  ಮೋದಿಯವರ ಯೋಜನೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಬಂದಿರುವಂತಹ ಒಂದೂವರೆ ಲಕ್ಷ ರೂಪಾಯಿಯ  ಯೋಜನೆಯೊಂದು ತನ್ನ ಬಳಿ ಇದೆ.   ಅದನ್ನು ತಮಗೆ ಪಡೆಯಲು ಆಧಾರ್ ಜೆರಾಕ್ಸ್ ಮತ್ತು 5 ಸಾವಿರ ರೂಪಾಯಿ ಬೇಕಾಗಿದ್ದು ತಾವು ಅದನ್ನು ನೀಡಿದರೆ ನಾಳೆನೇ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಒಂದೂವರೆ ಲಕ್ಷ ರೂಪಾಯಿ ಬರುತ್ತದೆ ಎಂದು ನಂಬಿಸಿ ಹಣ ಪಡೆದು ಪರಾರಿಯಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.  ಈ ಘಟನೆಯಲ್ಲಿ ಮೋಸ ಹೋಗಿದ್ದ ವ್ಯಕ್ತಿಯೇ ವಿಡಿಯೋ  ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

- Advertisement -

Latest News

error: Content is protected !!