- Advertisement -
- Advertisement -
ಬೆಳ್ತಂಗಡಿ, ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಬೆಳ್ತಂಗಡಿಯ ರಿಕ್ಷಾ ಚಾಲಕರಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಬೆಳ್ತಂಗಡಿ ನಗರದ ರಿಕ್ಷಾ ಚಾಲಕರುಗಳ ಸಂಘಟನೆಗಳ ಮುಖಂಡರುಗಳ ಸಹಕಾರದೊಂದಿಗೆ ನಗರದ ವಿವಿದೆಡೆಗಳಲ್ಲಿ ವಿತರಣೆ ಮಾಡಲಾಯಿತು.
ಬಳಿಕ ತಾಲೂಕಿನ ಚಾರ್ಮಾಡಿ ಹಾಗೂ ಇತರೆಡೆಗಳಲ್ಲಿಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಇಂದು ಸುಮಾರು 500 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಭಿನಂದನ್ ಹರೀಶ್, ಜಗದೀಶ್ ಡಿ., ಬಿ.ಕೆ.ವಸಂತ್, ನಾಗರಾಜ ಲಾಯಿಲ, ಜನಾರ್ಧನ, ಪ್ರಭಾಕರ ಓಡಿಲ್ನಾಳ ಹಾಗೂ ಇತರರು ಇದ್ದರು.
- Advertisement -
