Sunday, April 28, 2024
Homeಕರಾವಳಿಪ್ರಧಾನಿ ಫಂಡ್ ಗೆ 30 ಕೋಟಿ ರೂ. ಟಿಕ್ ಟಾಕ್ ದೇಣಿಗೆ ನೀಡಿಲ್ಲವೇ? ಅದನ್ನು ವಾಪಾಸ್...

ಪ್ರಧಾನಿ ಫಂಡ್ ಗೆ 30 ಕೋಟಿ ರೂ. ಟಿಕ್ ಟಾಕ್ ದೇಣಿಗೆ ನೀಡಿಲ್ಲವೇ? ಅದನ್ನು ವಾಪಾಸ್ ಮಾಡಿ: ಯು.ಟಿ.ಖಾದರ್ ಒತ್ತಾಯ

spot_img
- Advertisement -
- Advertisement -

ಮಂಗಳೂರು: ಪಿಎಂ ಕೇರ್ಸ್​​​​​​​ ನಿಧಿಗೆ ಚೀನಾ ಮೂಲದ ಟಿಕ್​​​ಟಾಕ್ ಸಂಸ್ಥೆ ನೀಡಿರುವ ₹ 30 ಕೋಟಿ ರೂ. ದೇಣಿಗೆಯನ್ನು ಕೇಂದ್ರ ಸರ್ಕಾರ ವಾಪಸ್​​​ ನೀಡಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.

ಟಿಕ್​​​ಟಾಕ್​​ಗೆ ನಿಷೇಧ ಹೇರಿದ್ದರಿಂದ ಕೇವಲ ವ್ಯಾಪಾರಿಯೊಬ್ಬನಿಗೆ ನಷ್ಟ ಅಷ್ಟೇ. ಚೀನಾಗೆ ಯಾವುದೇ ನಷ್ಟವಿಲ್ಲ. ಅದರಿಂದ ಭಾರತಕ್ಕೂ ಲಾಭವಿಲ್ಲ. ಟಿಕ್​​​​ಟಾಕ್​ ಕಂಪನಿ ಪಿಎಂ ಕೇರ್ಸ್​​​​ ನಿಧಿಗೆ ₹ 30 ಕೋಟಿ ನೀಡಿದೆ ಎಂಬ ಮಾಹಿತಿಯಿದೆ. ಆ ಹಣವನ್ನು ಏಕೆ ಮರಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಆ್ಯಪ್ ನಿಷೇಧದಿಂದ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಬ್ಯಾನ್ ಮಾಡಲಾಗಿದೆ. ಕೇಂದ್ರದ ನಿರ್ಧಾರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ ನಗುವ ಪರಿಸ್ಥಿತಿ ಬಂದಿದೆ ಎಂದರು.

- Advertisement -
spot_img

Latest News

error: Content is protected !!