- Advertisement -
- Advertisement -
ಸುಳ್ಯ: ಬೆಳ್ಳಾರೆಯಲ್ಲಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು ಜನಪ್ರತಿನಿಧಿಗಳು ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭೇಟಿ ನೀಡಿದ್ದಾರೆ.
ನೆಟ್ಟಾರು ಗ್ರಾಮದಲ್ಲಿರುವ ಮೃತ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಸಂಜೀವ ಮಟಂದೂರು ಮತ್ತು ಶಕುಂತಲಾ ಶೆಟ್ಟಿ ಪ್ರವೀಣ್ ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ದು:ಖತಪ್ತರಾದ ಪ್ರವೀಣ್ ತಾಯಿ ಶಕುಂತಲಾ ಶೆಟ್ಟಿ ಅವರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.
- Advertisement -