Friday, June 5, 2026
Homeಕರಾವಳಿಶಾಸಕ ಎಸ್.ಅಂಗಾರ ಅವರ ಪತ್ನಿಗೂ ಕೊರೊನಾ ಸೋಂಕು

ಶಾಸಕ ಎಸ್.ಅಂಗಾರ ಅವರ ಪತ್ನಿಗೂ ಕೊರೊನಾ ಸೋಂಕು

- Advertisement -
- Advertisement -

ಸುಳ್ಯ: ನಿನ್ನೆಯಷ್ಟೇ ಶಾಸಕ ಎಸ್. ಅಂಗಾರ ಹಾಗೂ ಅವರ ಕಾರು ಚಾಲಕ ಮುರಳಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಶಾಸಕರು ಹಾಗೂ ಅವರ ಕಾರು ಚಾಲಕರ ಮನೆಯವರನ್ನೆಲ್ಲಾ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಎಸ್ .ಅಂಗಾರ ಅವರ ಪತ್ನಿ ವೇದಾವತಿ ಅವರಿಗೆ ಕೋವಿಡ್ -19 ಸೋಂಕು ತಗುಲಿರೋದು ದೃಢಪಟ್ಟಿದೆ. ಹಾಗೇ ಅವರ ಮನೆಯ ಇತರೆ ಇಬ್ಬರೂ ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಇನ್ನು ಕಾರು ಚಾಲಕ ಮುರಳಿ ಅವರ ಮನೆಯವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಇದೀಗ ಶಾಸಕರು ಹಾಗೂ ಮನೆಯವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!