Monday, June 30, 2025
Homeಕರಾವಳಿಎಸ್ಪಿ ವಿರುದ್ಧ ಕಿಡಿಕಾರಿದ ಶಾಸಕ ಹರೀಶ್ ಪೂಂಜ; ಹೈಕೋರ್ಟ್ ಛೀಮಾರಿ ಬಗ್ಗೆ ಉತ್ತರಿಸಲು ನಿರಾಕರಿಸಿದ ಶಾಸಕ

ಎಸ್ಪಿ ವಿರುದ್ಧ ಕಿಡಿಕಾರಿದ ಶಾಸಕ ಹರೀಶ್ ಪೂಂಜ; ಹೈಕೋರ್ಟ್ ಛೀಮಾರಿ ಬಗ್ಗೆ ಉತ್ತರಿಸಲು ನಿರಾಕರಿಸಿದ ಶಾಸಕ

spot_img
- Advertisement -
- Advertisement -

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸರ ವಿರುದ್ಧ ಜಿದ್ದಿಗೆ ಬಿದ್ದಿದ್ದು ಮತ್ತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹರಿಹಾಯ್ದಿದ್ದಾರೆ. ಎಸ್ಪಿ ರಿಷ್ಯಂತ್ ಸಿಂಗ್ ಕಾಂಗ್ರೆಸ್ ವಕ್ತಾರನ ರೀತಿ ಮಾತಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಹರೀಶ್ ಪೂಂಜ ಅವರನ್ನು 15ಕ್ಕೂ ಹೆಚ್ಚು ಪೊಲೀಸರು ಮೂರು ಜೀಪುಗಳಲ್ಲಿ ಅರೆಸ್ಟ್ ಮಾಡುವುದಾಗಿ ಬಂದಿದ್ದರು. ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಮತ್ತು ಮುಖ್ಯಮಂತ್ರಿಯನ್ನು ಮೆಚ್ಚಿಸಲು ಮೊನ್ನೆ ಧರ್ಮಸ್ಥಳದಲ್ಲಿ ಎಸ್ಪಿಯವರು ಕಾಗಕ್ಕ ಗೂಬಕ್ಕನ ಕತೆ ಹೇಳುವ ರೀತಿ ಮಾತಾಡಿದ್ದಾರೆ,’ ಎಂದು ಹರೀಶ್ ಪೂಂಜ ಆರೋಪಿಸಿದ್ದಾರೆ.

ಡಿವೈಎಸ್ಪಿ ಸೇರಿದಂತೆ ಎಲ್ಲ ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗುತ್ತೇವೆಂದು ಮನೆಗೆ ಬಂದಿದ್ದರು. ಇನ್ನು ಈ ಘಟನೆ ಕುರಿತು ಹರೀಶ್ ಪೂಂಜ, ‘ಅಷ್ಟು ಪೊಲೀಸರು ನೋಟೀಸ್ ಕೊಟ್ಟು ಹೋಗುವುದಕ್ಕೆ ಮನೆಗೆ ಬರಬೇಕಿತ್ತೇ? ಇನ್ನು ಎಸ್ಪಿ ಅವರು, ‘ಸಂಜೆ ಏಳು ಗಂಟೆಯಾಗಿದ್ದರಿಂದ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದರಿಂದ ಪೊಲೀಸರು ಹಿಂತಿರುಗಿದ್ದರು,’ ಎಂದು ಒಂದು ಕಡೆ ಹೇಳುತ್ತಾರೆ. ಪೊಲೀಸರು ಒಬ್ಬ ಜನಪ್ರತಿನಿಧಿಯ ಮಾತು ಕೇಳಿ ಹಿಂತಿರುಗಿದ್ದಾಗಿ ಹೇಳಿದ್ದಾರೆ. ಯಾರು ಆ ಜನಪ್ರತಿನಿಧಿಯೆಂದು ನಿರ್ದಿಷ್ಟವಾಗಿ ಹೇಳಬೇಕು,’ ಎಂದು ಹೇಳಿದರು.

ಇನ್ನು ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲು ಎನ್ನುವ ಹಾಗೆ ಪ್ರಕರಣ ನಡೆದ ಮೂರೇ ದಿನದಲ್ಲಿ ಚಾರ್ಜ್ ಶೀಟ್ ಹಾಕಿದ್ದಾರೆ. ಕಳಂಜದಲ್ಲಿ ನಡೆದ ಘಟನೆ ಬಗ್ಗೆ ಅರಣ್ಯ ಇಲಾಖೆಯ ಕೇಸನ್ನು ವಜಾ ಮಾಡುತ್ತೇವೆಂದು ಸದನದಲ್ಲಿ ಸಚಿವರೇ ಹೇಳಿದ್ದರು. ಆದರೆ ಈಗ ಇಲಾಖೆಯಿಂದ ಚಾರ್ಜ್ ಶೀಟ್ ಹಾಕಿದ್ದಾರೆ ಎಂದರು.

ಇನ್ನು ನಿಮ್ಮ ವಿರುದ್ಧ ಹೈಕೋರ್ಟ್ ಛೀಮಾರಿ ಹಾಕಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರೀಶ್ ಪೂಂಜ, ‘ಕೋರ್ಟಿನ ವಿಚಾರ ಇರಲಿ, ನಾವು ನೋಡಿಕೊಳ್ಳುತ್ತೇವೆ. ಅದರ ಬಗ್ಗೆ ಈಗ ಚರ್ಚೆ ಬೇಡ,’ ಎಂದು ತಿಳಿಸಿದರು.

ಪೊಲೀಸರು ಸಂಸದರ ವಿನಂತಿ ಮೇರೆಗೆ ಹಿಂದೆ ಸರಿದಿದ್ದು ಅಂತ ಎಸ್ಪಿ ಹೇಳಿದ್ದರಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಸದ ನಳಿನ್ ಕುಮಾರ್, ‘ಡಿವೈಎಸ್ಪಿ ಬಳಿಯಲ್ಲಿ ನಾವು ಅರೆಸ್ಟ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ಬರೀ ನೋಟಿಸ್ ಕೊಡಲು ಬಂದಿದ್ದಾಗಿ ತಿಳಿಸಿದ್ದರು. ಹಾಗಾದರೆ ನೋಟೀಸ್ ಕೊಟ್ಟು ಹೋಗಿ, ಗೊಂದಲ ಯಾಕೆ ಮಾಡುತ್ತೀರಿ ಎಂದಿದ್ದಕ್ಕೆ, ಶಾಸಕರು ಠಾಣೆಗೆ ಬಂದು ಹೇಳಿಕೆ ಕೊಡಬೇಕು ಎಂದರು. ನೀವು ಹೋಗಿ, ನಾವು ಠಾಣೆಗೆ ಬರುತ್ತೇವೆ ಎಂದಿದ್ದಕ್ಕೆ ಪೊಲೀಸರು ಹಿಂತಿರುಗಿದ್ದರು. ನಂತರದಲ್ಲಿ ಶಾಸಕರು ವಕೀಲರೊಂದಿಗೆ ರಾತ್ರಿ ಹೊತ್ತಿನಲ್ಲಿ ಠಾಣೆಗೆ ಹೋಗಿದ್ದರು. ಇಷ್ಟೇ ಆಗಿರೋದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಈ ಸಂದರ್ಭದಲ್ಲಿ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಲೋಕಸಭೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಹಿರಿಯ ವಕೀಲ ಶಂಭು ಶರ್ಮ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!