- Advertisement -
![]()
- Advertisement -
ಕಾಪು ಮಾರಿಗುಡಿ ಬಳಿ ಸೋಮವಾರ ಬೆಳಗ್ಗೆ ಸ್ಕೂಟರ್ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ (27) ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಕೆಲಸಕ್ಕೆ ಹೋಗಿದ್ದರು. ಮನೆ ಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡ ಮನೆಯಲ್ಲಿ ಇರಲಿಲ್ಲ. ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿರುವ ಅವರು ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆ ಮಾತಾಡಬಲ್ಲವರಾಗಿದ್ದಾರೆ.
ಅವರ ಕುರಿತಾಗಿ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸಲು ಕೋರಲಾಗಿದೆ.
- Advertisement -


