Friday, May 3, 2024
Homeಕರಾವಳಿರಬ್ಬರ್ ಬೋರ್ಡ್ ಕಾರ್ಮಿಕರಿಗೆ ಬೋನಸ್, ಅಡಿಕೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ:ವಿಧಾನಸಭೆಯಲ್ಲಿ ಸುಳ್ಯ ಶಾಸಕಿ...

ರಬ್ಬರ್ ಬೋರ್ಡ್ ಕಾರ್ಮಿಕರಿಗೆ ಬೋನಸ್, ಅಡಿಕೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ:ವಿಧಾನಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆಗ್ರಹ

spot_img
- Advertisement -
- Advertisement -

ಬೆಳಗಾವಿ: ರಬ್ಬರ್ ಬೋರ್ಡ್ ಕಾರ್ಮಿಕರಿಗೆ ಬೋನಸ್ ಮತ್ತು ಮನೆ ದುರಸ್ತಿ ಮಾಡಿಕೊಡಬೇಕು ಹಾಗೂ  ಸುಳ್ಯ ಕ್ಷೇತ್ರದಲ್ಲಿ ಆನೆ ತುಳಿತದಿಂದ ಸಾವನ್ನಪ್ಪಿದ ಇಬ್ಬರ ಕುಟುಂಬಕ್ಕೆ ೨೫ ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ಒತ್ತಾಯ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ, ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಬೆಂಬಲ ಬೆಲೆ ಹಾಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.

ಶಾಸಕರ ಆಗ್ರಹಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ರಬ್ಬರ್ ಕಾರ್ಮಿಕರಿಗೆ ಈಗಾಗಲೇ 8.33% ಬೋನಸ್ ಕೊಟ್ಟಿದ್ದೇವೆ, ಅವರು 20% ಕೇಳುತ್ತಿದ್ದಾರೆ, ಆದರೆ ನಷ್ಟದಲ್ಲಿರುವ ಕಾರಣ ಅಷ್ಟು ಕೊಡಲು ಆಗಲ್ಲ ಎಂಬ ಪ್ರಸ್ತಾವನೆ ಆರ್ಥಿಕ ಇಲಾಖೆಯಿಂದ ಬಂದಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಒಳಗಾದ ಕುಟುಂಬಕ್ಕೆ ಈಗಾಗಲೇ ಸರ್ಕಾರದ ಮಾನದಂಡದಂತೆ 15 ಲಕ್ಷ ರೂ. ಪರಿಹಾರ ಕೊಡಲಾಗಿದೆ ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!