Friday, June 26, 2026
Homeಕರಾವಳಿವಿಟ್ಲ: ಪುಣಚದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ

ವಿಟ್ಲ: ಪುಣಚದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ

- Advertisement -
- Advertisement -

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಮಲೆತ್ತಡ್ಕ ಎಂಬಲ್ಲಿಂದ ಬುಧವಾರ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ತೋಟದ ಕೆರೆಯಲ್ಲಿ ಗುರುವಾರ ಪತ್ತೆಯಾಗಿದೆ.

ಮಲೆತ್ತಡ್ಕ ನಿವಾಸಿ ಜಯರಾಮ ಭಟ್ ಎಂಬವರು ಬುಧವಾರ ನಾಪತ್ತೆಯಾಗಿದ್ದರು.  ಬೆಳಗ್ಗೆ ಮಗುವನ್ನು ಶಾಲೆ ಬಿಟ್ಟು, ಬಳಿಕ ನಾಪತ್ತೆಯಾಗಿದ್ದರು.ತೋಟದಲ್ಲಿ ನಡೆದು ಹೋಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!